ಟಿ20 ವಿಶ್ವಕಪ್‌ನ ಸೂಪರ್-8 ಸುತ್ತಿಗೆ 8 ತಂಡಗಳು ಎಂಟ್ರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:
 
ಟಿ20 ವಿಶ್ವಕಪ್‌ನ ಸೂಪರ್-8 ಆಡಲಿರುವ ಎಂಟು ತಂಡಗಳು ಖಚಿತವಾದಂತ್ತಾಗಿದೆ. ಈ ಎಂಟು ತಂಡಗಳನ್ನು ತಲಾ 4 ರಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಜೂನ್ 19 ರಿಂದ ಸೂಪರ್-8 ಪಂದ್ಯಗಳು ವೆಸ್ಟ್ ಇಂಡೀಸ್‌ನಲ್ಲಿ ಆರಂಭವಾಗಲಿವೆ.

ಸೂಪರ್-8 ತಲುಪಿದ ತಂಡ
ಬಾಂಗ್ಲಾದೇಶ ಇಂದು ನೇಪಾಳ ತಂಡವನ್ನು ಸೋಲಿಸುವ ಮೂಲಕ ಸೂಪರ್-8 ತಲುಪಿದ ಕೊನೆಯ ತಂಡವಾಯಿತು. ಈಗ ಸೂಪರ್-8 ಸುತ್ತಿಗೆ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಯುಎಸ್ಎ, ಇಂಗ್ಲೆಂಡ್, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ತಂಡಗಳು ಅರ್ಹತೆ ಪಡೆದಿವೆ. ಈ ಎಲ್ಲಾ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.

ಸೂಪರ್-8 ರ ಮೊದಲ ಗುಂಪು- ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ.

ಸೂಪರ್-8 ರ ಎರಡನೇ ಗುಂಪು – ಅಮೆರಿಕ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್.

ಈ ಬಾರಿ ವಿಶ್ವಕಪ್‌ನಲ್ಲಿ 20 ತಂಡಗಳು ಭಾಗವಹಿಸಿದ್ದವು. ಈ 20 ತಂಡಗಳಲ್ಲಿ ಎಂಟು ತಂಡಗಳು ಸೂಪರ್-8ಗೆ ಅರ್ಹತೆ ಪಡೆದಿದ್ದರೆ, ಇನ್ನೊಂದೆಡೆ 12 ತಂಡಗಳ ಟಿ20 ವಿಶ್ವಕಪ್ ಪಯಣ ಅಂತ್ಯಗೊಂಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!