ಬಂಗಾಳದಲ್ಲಿ ಕಾಂಚನಜುಂಗಾ ಎಕ್ಸ್‌ಪ್ರೆಸ್ ದುರಂತ: 19 ಟ್ರೈನ್ ಸಂಚಾರ ರದ್ದು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದ್ದು,15 ಜೀವಗಳು ಬಲಿಯಾಗಿದೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಈ ಅಪಘಾತದ ಪರಿಣಾಮ 19ಕ್ಕೂ ಹೆಚ್ಚು ರೈಲುಗಳ ಪ್ರಯಾಣ ರದ್ದಾಗಿದೆ.

ಕೋಲ್ಕತಾದಿಂದ ಸೆಲ್ದಾಹ್ ರೈಲು ನಿಲ್ದಾಣದತ್ತ ತೆರಳುತ್ತಿದ್ದ ಎಕ್ಸ್‌ಪ್ರೆಸ್ ರೈಲಿಗೆ ವೇಗವಾಗಿ ಬಂದ ಗೂಡ್ಸ್ ರೈಲು ಡಿಕ್ಕಿಯಾಗಿದೆ. ಎರಡು ಬೋಗಿಗಳು ಮೇಲಕ್ಕೆ ಹಾರಿ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಿಂದ ಈ ಮಾರ್ಗದಲ್ಲಿ ಸಂಚರಿಸುವ 19 ರೈಲುಗಳು ರದ್ದು ಮಾಡಲಾಗಿದೆ.

ರೈಲು ಸಂಖ್ಯೆ 19602 ಜಲ್‌ಪೈಗುರಿ – ಉದಯಪುರಿ ಸಿಟಿ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 20503 ದಿಬ್ರುಗಡ- ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 12423 ದಿಬ್ರುಗಡ -ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 01666 ಅಗರ್ತಲಾ- ರಂಗಿಯಾ ವಿಶೇಷ
ರೈಲು ಸಂಖ್ಯೆ 12346 ಗುವ್ಹಾಟಿ- ಹೌರಾ ಸರಯಿಘಾಟ್ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 12505 ಕಾಮಾಕ್ಯ – ಆನಂದ ವಿಹಾರ ಟರ್ಮಿನಲ್ ನಾರ್ತ್ಈಸ್ಟ್ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 01666 ಅಗರ್ತಲ -ರಂಗಿಯಾ ಸ್ಪೆಷಲ್
ರೈಲು ಸಂಖ್ಯೆ 12510 ಗುಹ್ವಾಟಿ- ಸಿಲ್ಚಾರ್ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 22302 ನ್ಯೂ ಜಲ್‌ಪೈಗುರಿ- ಹೌರ ವಂದೇ ಭಾರತ್ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 22504 ದಿಬ್ರುಗಡ – ಕನ್ಯಾಕುಮಾರಿ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 15620 ಕಾಮಾಕ್ಯ – ಗಯಾ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 15962 ದಿಬ್ರುಗಡ – ಹೌರ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 15636 ಗುವ್ಹಾಟಿ -ಒಕ್ಹಾ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 15930 ಟಿನುಸುಕಿಯಾ- ತಂಬರಮ್ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 12377 ಸೀಲ್ದಾಹ್ – ಅಲಿಪುರದೌರ್ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 06105 ನಾಗರಕೊಯಿಲ್-ದಿಬ್ರುಗಡ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 12424 ನವದೆಹಲಿ- ದಿಬ್ರುಗಡ ರಾಜಧಾನಿ ಎಕ್ಸ್‌ಪ್ರೆಸ್

ಇತ್ತ ರೈಲು ಅಪಘಾತದ ಬೆನ್ನಲ್ಲೇ ರೈಲ್ವೇ ಸಚಿವಾಲಯ ಸಹಾಯವಾಣಿ ತೆರೆದಿದೆ.
033-23508794
033-23833326

GHY ನಿಲ್ದಾಣ ಸಹಾಯವಾಣಿ
03612731621
03612731622
03612731623

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!