ಕೊಡಗು ಜಿಲ್ಲೆಯಲ್ಲಿ 81 ಹೊಸ ಕೋವಿಡ್ ಪ್ರಕರಣ ದೃಢ

ಹೊಸದಿಗಂತ ವರದಿ, ಮಡಿಕೇರಿ:

ಕೊಡಗು ಜಿಲ್ಲೆಯಲ್ಲಿ ಮಂಗಳವಾರ 81 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.
ಮಡಿಕೇರಿ ತಾಲೂಕಿನಲ್ಲಿ 17, ಸೋಮವಾರಪೇಟೆ ತಾಲೂಕಿನಲ್ಲಿ 23 ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 41 ಹೊಸ ಪ್ರಕರಣಗಳು ವರದಿಯಾಗಿವೆ.
ಇದರೊಂದಿಗೆ ಜಿಲ್ಲೆಯಲ್ಲಿನ ಕೊರೋನಾ ಸೋಂಕಿತರ ಒಟ್ಟು ಸಂಖ್ಯೆ 46,689ರಷ್ಟಾಗಿದ್ದು, ಕಳೆದ‌ 24ಗಂಟೆಗಳಲ್ಲಿ 732ಮಂದಿ ಗುಣಮುಖರಾಗುವುದರೊಂದಿಗೆ ಇದುವರೆಗೆ ಒಟ್ಟು 44,427ಮಂದಿ ಸೋಂಕು ಮುಕ್ತರಾಗಿದ್ದಾರೆ. ಅಲ್ಲದೆ 443 ಮಂದಿ‌ ಸಾವಿಗೀಡಾಗಿದ್ದಾರೆ.
ಜಿಲ್ಲೆಯಲ್ಲಿ ಪ್ರಸಕ್ತ 1819ಸಕ್ರಿಯ ಪ್ರಕರಣ, 189 ಕಂಟೈನ್ ಮೆಂಟ್ ವಲಯಗಳು ಹಾಗೂ ಪಾಸಿಟಿವಿಟಿ ದರ ಶೇ. 4.67ರಷ್ಟಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!