Wednesday, June 7, 2023

Latest Posts

VIRAL VIDEO| ವಯಸ್ಸು ದೇಹಕ್ಕೆ ಮಾತ್ರ, ಮನಸ್ಸಿಗಲ್ಲ: 84ವರ್ಷದ ವೃದ್ಧೆಯ ಸಾಹಸ ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆಕೆಗೆ 84 ವರ್ಷ…ಅತ್ಯಂತ ಕಷ್ಟಕರವಾದ ಸವಾಲುಗಳನ್ನು ಜಯಿಸಿದ ನಂತರ ಅಜ್ಜಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಆಕೆಯನ್ನು ನೋಡಿದರೆ ವಯಸ್ಸು ಕೇವಲ ಒಂದು ಸಂಖ್ಯೆ ಮಾತ್ರ. ಉತ್ಸಾಹ, ದಿಟ್ಟತನ, ಶಕ್ತಿಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಈ ವೃದ್ಧೆ ಸಾಬೀತು ಮಾಡಿದ್ದಾರೆ.

ಅಮೆರಿಕದ ಮಿಸೌರಿಯ 84 ವರ್ಷದ ಮಿಲ್ಡ್ರೆಡ್ ವಿಲ್ಸನ್ ಮಣ್ಣಿನ ಓಟದಲ್ಲಿ ಭಾಗವಹಿಸಿದ್ದರು. ಮಡ್ ರೇಸ್‌ನ ಪ್ರತಿಯೊಂದು ವಿಭಾಗವು ಎಷ್ಟೇ ಕಠಿಣವಾಗಿದ್ದರೂ, ಅವುಗಳನ್ನು ಜಯಿಸಲಾಯಿತು. ಕಷ್ಟಪಟ್ಟು ಹೆಜ್ಜೆ ಹಾಕುವ ವಯಸ್ಸಿನಲ್ಲಿ ಕೆಸರಿನಲ್ಲಿ ಓಡಿ, ತೆವಳುತ್ತಾ, ಉರುಳುತ್ತಾ ಓಟದಲ್ಲಿ ಭಾಗವಹಿಸಿದ ರೀತಿ ಸಂಘಟಕರನ್ನು ದಂಗುಬಡಿಸಿತು. ಅಲ್ಲದೆ ಸಂಘಟಕರು ಆಕೆಯನ್ನು ಪ್ರೋತ್ಸಾಹಿಸಿದ ರೀತಿಯನ್ನು ಶ್ಲಾಘಿಸಬೇಕು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ.

ಮಿಲ್ಡ್ರೆಡ್ ವಿಲ್ಸನ್ ಅವರು ತಮ್ಮ ಪತಿ ಫಾರೆಲ್ ಅವರ ನೆನಪಿಗಾಗಿ ಈ ಸ್ಪರ್ಧೆಯಲ್ಲಿ ಭಾಗಿವಹಿಸಿದ್ದಾರಂತೆ. ತಾನು ಆರೋಗ್ಯವಾಗಿರುವವರೆಗೂ ಓಟದಲ್ಲಿ ಭಾಗವಹಿಸುತ್ತೇನೆ ಎನ್ನುತ್ತಾರೆ. ಪತಿಯನ್ನು ಕಳೆದುಕೊಂಡ ನೋವಿನಿಂದ ಮುಕ್ತಿ ಹೊಂದಲು ಹಾಗೂ ದೈಹಿಕವಾಗಿ ಸದೃಢರಾಗಲು ಈ ಓಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮಿಲ್ಡ್ರೆಡ್ ವಿಲ್ಸನ್ ಅವರ ಧೈರ್ಯ ಮತ್ತು ಉತ್ಸಾಹಕ್ಕೆ ಹ್ಯಾಟ್ಸ್ ಆಫ್.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!