ಪ್ಲಾಸ್ಟಿಕ್‌ ಮುಕ್ತ ಕರಾವಳಿಗಾಗಿ 840 ಕೋಟಿ ರೂ. ಯೋಜನೆಗೆ ಅನುಮೋದನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕಡಲನ್ನು ಸೇರುತ್ತಿರುವ ಮತ್ತು ಕಡಲ ತೀರವನ್ನು ಆವರಿಸಿರುವ ಪ್ಲಾಸ್ಟಿಕ್‌ ತ್ಯಾಜ್ಯ ಸಮುದ್ರವನ್ನು ಸೇರದಂತೆ ತಡೆಯುವ ಮತ್ತು ಪಶ್ಚಿಮಘಟ್ಟದ ಜೀವವೈವಿಧ್ಯ ಸಂರಕ್ಷಿಸುವ ನಿಟ್ಟಿನಲ್ಲಿ ರಾಜ್ಯದ 320-ಕಿಮೀ ಕರಾವಳಿ ಪ್ರದೇಶವನ್ನ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತಗೊಳಿಸಲು ವಿಶ್ವಬ್ಯಾಂಕ್ 840 ಕೋಟಿ ರೂಪಾಯಿಗಳ ಯೋಜನೆಗೆ ಅನುಮೋದನೆ ನೀಡಿದೆ.

ಕರ್ನಾಟಕ ಸ್ಟ್ರೆಥನಿಂಗ್ ಆಫ್ ಕೋಸ್ಟಲ್ ರೆಸಿಲಿಯನ್ಸ್ ಎಕಾನಮಿ ಯೋಜನೆಯಡಿ ಅನುಮೋದನೆ ನೀಡಿದ್ದು ಅರಣ್ಯ, ಮೀನುಗಾರಿಕೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಇಲಾಖೆಗಳು ಮಾಲಿನ್ಯ ತಡೆದುಕೊಳ್ಳುವಂತೆ ಕರಾವಳಿಯ ಸಾಮರ್ಥ್ಯವನ್ನು ಸುಧಾರಿಸಲು ಮತ್ತು ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ವಿವಿಧ ಯೋಜನೆಗಳನ್ನು ಜಾರಿಗೆ ತರಲಿವೆ. ಈ ಯೋಜನೆಯು ಸಮುದ್ರ ಸವೆತ ಮತ್ತು ಸಮುದ್ರ ಸಂರಕ್ಷಣೆ ಮಾಡುವ ಉದ್ದೇಶ ಹೊಂದಿದೆ, ಇದು ಕರಾವಳಿಯುದ್ದಕ್ಕೂ ಆಲಿವ್ ರಿಡ್ಲಿ ಆಮೆಗಳು ಮತ್ತು ಡಾಲ್ಫಿನ್‌ಗಳ ಸಂರಕ್ಷಣೆಗೆ ಒತ್ತು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

 

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!