ದಿನವಿಡೀ ನಿದ್ದೆ ಮಾಡೋ ಚಾಲೆಂಜ್‌ನಲ್ಲಿ 9ಲಕ್ಷ ರೂ. ಗೆದ್ದ ಬೆಂಗಳೂರಿನ ಮಹಿಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರತಿದಿನ ಒಂಬತ್ತು ಗಂಟೆಯಾದ್ರೂ ನಿದ್ದೆ ಮಾಡ್ತೀರಾ? ನಿಮ್ಮಂತೆಯೇ ಒಂಬತ್ತು ಗಂಟೆ ನಿದ್ದೆ ಮಾಡಿದ ಈ ಬೆಂಗಳೂರಿನ ಮಹಿಳೆ ಕಾಂಪಿಟೇಷನ್‌ ಒಂದನ್ನು ಗೆದ್ದಿದ್ದಾರೆ. ಇದರಿಂದಾಗಿ ಒಂಬತ್ತು ಲಕ್ಷ ರೂ. ಬಹುಮಾನ ಪಡೆದಿದ್ದಾರೆ.

ವೇಕ್‌ಫಿಟ್ ಕಂಪೆಯಲ್ಲಿ “ಸ್ಲೀಪ್ ಇಂಟರ್ನ್‌ಶಿಪ್” ಅನ್ನು ಆಯೋಜಿಸಲಾಗಿದ್ದು, ಈ ಸ್ಲೀಪ್ ಇಂಟರ್ನ್‌ಶಿಪ್ ದೇಶದಾದ್ಯಂತ ಗಮನ ಸೆಳೆದಿತ್ತು. ಇದು 60 ದಿನಗಳ ಸ್ಲೀಪ್ ಇಂಟರ್ನ್‌ಶಿಪ್. ಇಲ್ಲಿ ಬೇರೇನೂ ಕೆಲಸ ಇಲ್ಲ. 9 ಗಂಟೆಗಳ ಕಾಲ ನಿದ್ರೆ ಮಾಡಬೇಕಾಗುತ್ತದೆ ಅಷ್ಟೇ. ಪವರ್ ನ್ಯಾಪ್‌ಗಳನ್ನು ತೆಗೆದುಕೊಳ್ಳುವ ಮೂಲಕ ಹೊಸ ವೇಕ್‌ಫಿಟ್ ಹಾಸಿಗೆಯನ್ನು ಪರೀಕ್ಷಿಸುವುದು ಅವರ ಕೆಲಸ.

ಬೆಂಗಳೂರಿನ ಸಾಯಿಶ್ವರಿ ಪಟೇಲ್ ಅವರು ಬೆಂಗಳೂರಿನ ಸ್ಟಾರ್ಟ್ ಅಪ್ ಹೋಮ್ ಆ್ಯಂಡ್​​ ಸ್ಲೀಪ್ ಸೊಲ್ಯೂಶನ್ ಬ್ರ್ಯಾಂಡ್ ವೇಕ್‌ಫಿಟ್‌ನ ಸ್ಲೀಪ್ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಮೂಲಕ ಅತೀ ಹೆಚ್ಚು ನಿದ್ದೆ ಮಾಡಿ ‘ಸ್ಲೀಪ್ ಚಾಂಪಿಯನ್’ ಪ್ರಶಸ್ತಿಯ ಜೊತೆಗೆ 9 ಲಕ್ಷ ರೂಪಾಯಿ ಬಹುಮಾನ ಗೆದ್ದಿದ್ದಾರೆ.

- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!