ಕಲಬುರಗಿಯಲ್ಲಿ 9 ಪಾಕ್ ಪ್ರಜೆಗಳು ವಾಸ, ಗೈಡ್ ಲೈನ್ ಪ್ರಕಾರ ಹಿಂತಿರುಗಲು ಕಮಿಷನರ್ ಸೂಚನೆ

ಹೊಸದಿಗಂತ ಕಲಬುರಗಿ:

ಕಲಬುರಗಿ ನಗರದಲ್ಲಿ 9 ಜನ ಪಾಕಿಸ್ತಾನ ಪ್ರಜೆಗಳು ಅಧಿಕೃತವಾಗಿ ವಾಸವಾಗಿದ್ದು,ಅವರೆಲ್ಲರನ್ನೂ ಕೇಂದ್ರ ಸರ್ಕಾರದ ಗೈಡ್ ಲೈನ್ ಪ್ರಕಾರ ಹಿಂತಿರುಗಲು ಸೂಚನೆ ನೀಡಲಾಗಿದೆ ಎಂದು ಕಲಬುರಗಿ ನಗರ ಪೋಲಿಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ತಿಳಿಸಿದರು.

ನಗರದ ಪೋಲಿಸ್ ಆಯುಕ್ತರ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಒಟ್ಟು 9 ಜನ ಪಾಕಿಸ್ತಾನ ಪ್ರಜೆಗಳು ವಾಸವಾಗಿದ್ದು,ಅದರಲ್ಲಿ 2 ಜನ ಲಾಂಗ್ ಟರ್ಮ್ ವೀಸಾ ಹೊಂದಿದವರಾಗಿದ್ದಾರೆ,7 ಜನ ವಿಸಿಟರ್ಸ್ ವೀಸಾ ಹೊಂದಿದವರಾಗಿದ್ದು, ಇವರೆಲ್ಲರೂ ಕಳೆದ 20 ವರ್ಷಗಳಿಂದ ಕಲಬುರಗಿ ನಗರದಲ್ಲಿ ವಾಸವಾಗಿದ್ದು, ಗೈಡ್ ಲೈನ್ ಪ್ರಕಾರ ಹಿಂತಿರುಗಲು ಸೂಚಿಸಲಾಗಿದೆ ಎಂದು ಹೇಳಿದರು.

ಏಳು ಜನ ವಿಸಿಟರ್ಸ್ ವೀಸಾ ಹೊಂದಿದವರಲ್ಲಿ ಒಬ್ಬರು ಮಹಿಳೆ ಅನುಮತಿ ಪಡೆದು ಅಮೆರಿಕಾಗೆ ಟ್ರಾವೆಲ್ ಗೆ ತೆರಳಿದ್ದು,ಇನ್ನೂಳಿದ 6 ಜನರಿಗೂ ನಾವು ಈಗಾಗಲೇ ಮಾಹಿತಿ ನೀಡಿದ್ದು,ಅವರಲ್ಲಿ ಮೂವರು ಮಹಿಳೆಯರು ಹಾಗೂ ಮೂವರು ಪುರುಷರು ಇದ್ದಾರೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಡಿಸಿಪಿ ಕನಿಕಾ ಸಿಕ್ರಿವಾಲ್ ಸೇರಿದಂತೆ ಇತರೆ ಹಿರಿಯ ಪೋಲಿಸ್ ಅಧಿಕಾರಿಗಳು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!