ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಜೊತೆ ಯುದ್ಧದ ಅನಿರ್ವಾಯತೆ ಇಲ್ಲ. ಯುದ್ಧದ ಬದಲು ಭದ್ರತೆ ಬಿಗಿ ಮಾಡಿಕೊಳ್ಳಬೇಕಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ನಾವು ಯಾವತ್ತೂ ಶಾಂತಿಯ ಪರ. ಯುದ್ಧದ ಯೋಚನೆ ಬೇಡ. ಭದ್ರತೆ ಬಿಗಿ ಮಾಡಿಕೊಳ್ಳಬೇಕು. ಕಾಶ್ಮೀರದ ಭದ್ರತೆ ವಿಚಾರದಲ್ಲಿ ಕೇಂದ್ರ ಸರ್ಕಾರ ಜನರಿಗೆ ಟೋಪಿ ಹಾಕಿದೆ. ಭದ್ರತೆ ಇದೆ ಎಂದು ನಂಬಿಕೊಂಡು ಜನ ಕಾಶ್ಮೀರಕ್ಕೆ ಹೋದರು. ಆದರೆ ಅಲ್ಲಿ ಭದ್ರತೆ ವೈಫಲ್ಯ ಉಂಟಾಗಿದೆ. ಹೋದ 26 ಜೀವ ವಾಪಸ್ ತರಲು ಸಾಧ್ಯನಾ. ಈಗ ಕೇಂದ್ರ ಸರ್ಕಾರ ಭದ್ರತಾ ವೈಫಲ್ಯವನ್ನು ಒಪ್ಪಿಕೊಂಡಿದೆ. ನಾನು ಮೊದಲೇ ಹೇಳಿದ್ದೆ ನನ್ನ ಮಾತು ನಿಜವಾಗಿದೆ” ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಗುಡುಗಿದ್ದಾರೆ.