ಜಿಂಬಾಬ್ವೆಯಲ್ಲಿ ಶೇ.90ರಷ್ಟು ಶಿಕ್ಷಕರು ಸಸ್ಪೆಂಡ್: ಸರ್ಕಾರಿ ಶಾಲೆ ಕ್ಲೋಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಿಂಬಾಬ್ವೆಯಲ್ಲಿ ಶೇ.90 ರಷ್ಟು ಶಿಕ್ಷಕರನ್ನು ಸಸ್ಪೆಂಡ್ ಮಾಡಿರುವ ಕಾರಣ ಶಾಲೆಗಳು ಮುಚ್ಚಿವೆ.
ಸಾರಿಗೆ ಸವಲತ್ತಿಗೆ ಆಗ್ರಹಿಸಿ ಜಿಂಬಾಬ್ವೆ ಶಿಕ್ಷಕರು ಪ್ರತಿಭಟಿಸುತ್ತಿದ್ದು, ಸಾರಿಗೆ ಹಣ ಭರಿಸದಿದ್ದರೆ ಶಾಲೆಗೆ ಬರುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಮುಷ್ಕರನಿರತ ಶಿಕ್ಷಕರಿಗೆ ಶಾಲೆಗೆ ಬರುವಂತೆ ಸರ್ಕಾರ ಸೂಚನೆ ನೀಡಿದ್ದರೂ, ಶಿಕ್ಷಕರು ಶಾಲೆಗೆ ಬಾರದ ಕಾರಣ ಸುಮಾರು 1,35,000 ಶಿಕ್ಷಕರನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಹರಾರೆಯ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಮನೆಗಳಿಂದ ಪ್ರಯಾಣಿಸುವ ವೆಚ್ಚ ಭರಿಸುವುದು ಕಷ್ಟವಾಗಿದೆ, ಇನ್ನು ಮಾಸಿಕ ವೇತನವೂ ಕಡಿಮೆ ಎಂದು ಸಾರಿಗೆ ವ್ಯವಸ್ಥೆ ಮಾಡಿ ಎಂದು ಶಿಕ್ಷಕರು ಆಗ್ರಹಿಸಿದ್ದರು. ಜಿಂಬಾಬ್ವೆಯಲ್ಲಿ ಶಿಕ್ಷಕರ ಸರಾಸರಿ ಮಾಸಿಕ ವೇತನ 7,500-8000ರಷ್ಟಿದೆ.

ಜಿಂಬಾಬ್ವೆಯಲ್ಲಿ ಸುಮಾರು 1,40,000 ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದು, ಅವರಲ್ಲಿ 1,35,000 ಶಿಕ್ಷಕರನ್ನು ಮೂರು ವಾರಗಳ ಅವಧಿಗೆ ಸಸ್ಪೆಂಡ್ ಮಾಡಲಾಗಿದೆ. ಶೇ.90 ರಷ್ಟು ಶಿಕ್ಷಕರನ್ನು ಸಸ್ಪೆಂಡ್ ಮಾಡಲಾಗಿದ್ದು, ಕೆಲ ಸರ್ಕಾರಿ ಶಾಲೆಗಳು ಮುಚ್ಚಿವೆ ಎಂದು ಪ್ರೊಗ್ರೆಸ್ಸೀವ್ ಟೀಚರ‍್ಸ್ ಯೂನಿಯನ್ ಅಧ್ಯಕ್ಷ ತಕವಫೀರಾ ಜೌ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!