ಹೊಸದಿಗಂತ ಡಿಜಟಲ್ ಡೆಸ್ಕ್
ಪ್ರಸುತ್ತ ದೇಶದಲ್ಲಿ ಹೆಚ್ಚುತ್ತಿರುವ ವಿಮಾನಗಳ ದುರಂತದಲ್ಲಿ ಬಹುತೇಕ ಬೋಯಿಂಗ್ ವಿಮಾನಗಳ ಪಾತ್ರ ಹೆಚ್ಚಿರುವ ಕಾರಣ ಇಲ್ಲಿನ ಪೈಲೆಟ್ಗಳಿಗೂ ಸೂಕ್ತ ತರಬೇತಿ ಅಗತ್ಯವಿರುವುದರಿಂದ ಸದ್ಯ ಸ್ಪೈಸ್ಜೆಟ್ನ ಪೈಲೆಟ್ಗಳಿಗೆ ನಿರ್ಬಂಧ ಹೇರಲಾಗಿದೆ.
ಸ್ಪೈಸ್ಜೆಟ್ನ 90 ಪೈಲೆಟ್ಗಳಿಗೆ ಮರುತರಬೇತಿ ನೀಡುವಂತೆ ನಾಗರಿಕ ವಿಮಾನ ಯಾನ ಸಚಿವಾಲಯ ಸೂಚಿಸಿದೆ.
ಬೋಯಿಂಗ್ 737 ವಿಮಾನ ಹಾರಾಟ ಪರೀಕ್ಷಾರ್ಥ ನಡೆಸಿದ ವೇಳೆ ಪೈಲೆಟ್ಗಳು ವಿಮಾನ ಹಾರಾಟವನ್ನು ಸರಿಯಾಗಿ ನಡೆಸದ ಕಾರಣದಿಂದ ಸ್ಪೈಸ್ಜೆಟ್ ಮತ್ತೊಮ್ಮೆ ತನ್ನ ಪೈಲೆಟ್ಗಳಿಗೆ ತರಬೇತಿ ಕೊಡಿ ಎಂದು ಹೇಳಿದೆ.ಯಶಸ್ವಿಯಾಗಿ ವಿಮಾನ ಹಾರಾಟ ನಡೆಸುವವರೆಗೂ ಈ ಪೈಲೆಟ್ಗಳಿಗೆ ವಿಮಾನ ಹಾರಾಟಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಡಿಜಿಸಿಎ ಮುಖ್ಯಸ್ಥ ಅರುಣ್ ಕುಮಾರ್ ತಿಳಿಸಿದ್ದಾರೆ.
ವಿಶ್ವದಾದ್ಯಂತ 2019ರ ನಂತರ ಬೋಯಿಂಗ್ 737 ವಿಮಾನ ದುರಂತದಲ್ಲಿ ಈವರೆಗೆ 346 ಮಂದಿ ಸಾವನ್ನಪ್ಪಿದ್ದಾರೆ.