ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಶಾಕ್ ಕೊಟ್ಟ ಇಡಿ: 11.70 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

ಹೊಸದಿಗಂತ ಡಿಜಟಲ್‌ ಡೆಸ್ಕ್

ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಆಸ್ತಿಯನ್ನ ಇಡಿ ಇಂದು ಮುಟ್ಟುಗೋಲು ಹಾಕಿಕೊಂಡಿದೆ. ಇದರಲ್ಲಿ ಮುಂಬೈನಲ್ಲಿ ಗಮನಾರ್ಹ ಆಸ್ತಿಗಳು ಮತ್ತು ಒಸ್ಮಾನಾಬಾದ್‌ನಲ್ಲಿ 148 ಎಕರೆ ಭೂಮಿ ಸೇರಿದೆ., ಈ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಕ್ರಮ ಕೈಗೊಂಡಿದೆ.
ನವಾಬ್ ಮಲಿಕ್ ಸೇರಿದ ಐದು ಫ್ಲ್ಯಾಟ್ʼಗಳನ್ನ ಇಡಿ ವಶಪಡಿಸಿಕೊಂಡಿದೆ. ಇವುಗಳಲ್ಲಿ ಮೂರು ಫ್ಲ್ಯಾಟ್ʼಗಳು ಕುರ್ಲಾದಲ್ಲಿ ಮತ್ತು ಎರಡು ಫ್ಲ್ಯಾಟ್ʼಗಳು ಬಾಂದ್ರಾ ಪ್ರದೇಶಲ್ಲಿವೆ.
ನವಾಬ್ ಮಲಿಕ್ ಮನಿ ಲಾಂಡರಿಂಗ್ʼಗೆ ಸಂಬಂಧಿಸಿದ ಆಸ್ತಿಯನ್ನ ಸಂಪಾದಿಸಿದ್ದು, ಆಸ್ತಿಯನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಹೇಳಿದೆ. ಕುಖ್ಯಾತ ಡಾನ್ ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ ಹಣಕಾಸು ವ್ಯವಹಾರಗಳಿಂದ ಆಸ್ತಿಗಳನ್ನ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಆದ್ದರಿಂದ, ಕುರ್ಲಿಯಾದಲ್ಲಿ ಗೋವಾವಾಲಾ ಕಾಂಪೌಂಡ್, ಕುರ್ಲಾದಲ್ಲಿ ವಾಣಿಜ್ಯ ಘಟಕ, ಕುರ್ತಾದಲ್ಲಿ 3 ಫ್ಲ್ಯಾಟ್ಗಳು ಮತ್ತು ಬಾಂದ್ರಾದಲ್ಲಿ 2 ಫ್ಲ್ಯಾಟ್ಗಳು ಮತ್ತು ಒಸ್ಮಾನಾಬಾದ್ನಲ್ಲಿ 148 ಎಕರೆ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಇಡಿ ನೀಡಿದ ಮಾಹಿತಿಯ ಪ್ರಕಾರ, ಮಲಿಕ್ ಆಸ್ತಿಯಿಂದ ಸುಮಾರು 11.70 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!