ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಠಾಣ್ ಸಿನಿಮಾದ ನಂತರ ಶಾರುಖ್ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ. ದಶಕದ ಬ್ರೇಕ್ ನಂತರ ಶಾರುಖ್ ಪಠಾಣ್ ಮೂಲಕ ಕಂಬ್ಯಾಕ್ ಮಾಡಿದ್ದರು.
ಇದೀಗ ಶಾರುಖ್ ನಟನೆಯ ಜವಾನ್ ಇಂದು ರಿಲೀಸ್ ಆಗಿದೆ. ಅಟ್ಲೀ ನಿರ್ದೇಶನದ ಈ ಸಿನಿಮಾದಲ್ಲಿ ಶಾರುಖ್ ಜೊತೆಗೆ ವಿಜಯ್ ಸೇತುಪತಿ, ನಯನತಾರಾ, ಸಾನ್ಯಾ ಮಲ್ಹೋತ್ರ, ಪ್ರಿಯಾಮಣಿ ನಟಿಸಿರೋದು ಪ್ಲಸ್ ಪಾಯಿಂಟ್ ಆಗಿದೆ.
ರಾಜಧಾನಿ ಬೆಂಗಳೂರಿನಲ್ಲಿ 900 ಶೋಬುಕ್ ಆಗಿದ್ದು, ಮೊದಲ ದಿನದ ಮೇಲೆಯೇ ಎಲ್ಲವೂ ಡಿಪೆಂಡ್ ಆಗಿದೆ. ಜವಾನ್ ಹಿಂದಿ ವರ್ಷನ್‌ಗೆ 750 ಶೋ, ತೆಲುಗಿಗೆ 41 ಶೋ ಹಾಗೂ ತಮಿಳಿಗೆ 100ಕ್ಕೂ ಹೆಚ್ಚು ವರ್ಷನ್ ಸಿಕ್ಕಿದೆ.
ಬೆಳಗ್ಗೆ 6:30ರಿಂದಲೇ ಸಿನಿಮಾ ಪ್ರದರ್ಶನ ಆರಂಭವಾಗಿದ್ದು, ಎಲ್ಲ ಶೋಗಳು ಹೌಸ್‌ಫುಲ್ ಆಗಿವೆ. ಇಂಟರ್ವಲ್‌ವರೆಗೂ ಸಿನಿಮಾ ಚೆನ್ನಾಗಿದೆ ಎನ್ನುವ ಅಭಿಪ್ರಾಯಗಳು ಮೂಡಿಬಂದಿವೆ.