October 18, 2026
Sunday, October 18, 2026
spot_img

ಭಾರತದಲ್ಲೇ ತಯಾರಾಗಲಿವೆ 94 ರಫೇಲ್ ಜೆಟ್‌ಗಳು! ರಕ್ಷಣಾ ಕ್ಷೇತ್ರದಲ್ಲಿ ‘ಮೇಕ್ ಇನ್ ಇಂಡಿಯಾ’ ಹೊಸ ಕ್ರಾಂತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ವಾಯುಪಡೆಯ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ 114 ರಫೇಲ್‌ ಯುದ್ಧ ವಿಮಾನಗಳ ಬಿಗ್ ಡೀಲ್‌ಗೆ ಸಂಬಂಧಿಸಿದಂತೆ, ಫ್ರಾನ್ಸ್ ಆಗಸ್ಟ್ ತಿಂಗಳಿನಲ್ಲಿ ತನ್ನ ಅಧಿಕೃತ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆಯಿದೆ. ಮೇ ತಿಂಗಳ ಆರಂಭದಲ್ಲಿ ಭಾರತ ಕಳುಹಿಸಿದ್ದ ಪ್ರಸ್ತಾವನೆಗೆ ಸ್ಪಂದಿಸಲು ಫ್ರೆಂಚ್ ಅಧಿಕಾರಿಗಳು ಆಗಸ್ಟ್ ಮಧ್ಯದವರೆಗೆ ಸಮಯ ಕೋರಿದ್ದಾರೆ.

ಮೇಕ್ ಇನ್ ಇಂಡಿಯಾ ಯೋಜನೆಗೆ ಭಾರೀ ಉತ್ತೇಜನ

ಈ ಐತಿಹಾಸಿಕ ಒಪ್ಪಂದದ ಭಾಗವಾಗಿ ಒಟ್ಟು 114 ಜೆಟ್‌ಗಳ ಪೈಕಿ 94 ರಫೇಲ್ ವಿಮಾನಗಳನ್ನು ಡಸಾಲ್ಟ್ ಏವಿಯೇಷನ್ ಮತ್ತು ಭಾರತೀಯ ಜಂಟಿ ಸಂಸ್ಥೆಗಳು ‘ಮೇಕ್ ಇನ್ ಇಂಡಿಯಾ’ ಅಡಿಯಲ್ಲಿ ಭಾರತದಲ್ಲೇ ತಯಾರಿಸಲಿವೆ. ಇದು ದೇಶೀಯ ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನಾ ಕ್ಷೇತ್ರಕ್ಕೆ ಬೃಹತ್ ಆಸರೆಯಾಗಲಿದೆ.

3 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಬೃಹತ್ ಡೀಲ್

ದೇಶದ ಭದ್ರತಾ ವ್ಯವಸ್ಥೆಯನ್ನು ಸುಸಜ್ಜಿತಗೊಳಿಸಲು ಭಾರತೀಯ ರಕ್ಷಣಾ ಸಚಿವಾಲಯವು 2026ರ ಫೆಬ್ರವರಿಯಲ್ಲೇ ಈ ಯೋಜನೆಗೆ ಪ್ರಾಥಮಿಕ ಅನುಮೋದನೆ ನೀಡಿತ್ತು. ಸರ್ಕಾರದಿಂದ ಅಧಿಕೃತ ವೆಚ್ಚದ ವಿವರ ಹೊರಬಿದ್ದಿಲ್ಲವಾದರೂ, ಈ ಒಪ್ಪಂದದ ಅಂದಾಜು ಮೊತ್ತ 2.90 ಲಕ್ಷ ಕೋಟಿಯಿಂದ 3.15 ಲಕ್ಷ ಕೋಟಿ ರೂಪಾಯಿ ಇರಲಿದೆ ಎಂದು ಅಂದಾಜಿಸಲಾಗಿದೆ. ಫ್ರಾನ್ಸ್‌ನಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಉಭಯ ದೇಶಗಳ ನಡುವೆ ಮುಂದಿನ ಸುತ್ತಿನ ದ್ವಿಪಕ್ಷೀಯ ಮಾತುಕತೆಗಳು ಆರಂಭವಾಗಲಿವೆ.

Must Read