October 14, 2026
Wednesday, October 14, 2026
spot_img

ದಿನಭವಿಷ್ಯ: ಕೆಲಸದ ಮೇಲಿನ ನಿಷ್ಠೆ ದೊಡ್ಡ ಯಶಸ್ಸನ್ನು ತಂದುಕೊಡಲಿದೆ, ನೆಮ್ಮದಿ ಕಾಪಾಡಿಕೊಳ್ಳಿ

ಮೇಷ
ಕೆಲಸದಲ್ಲಿ ನಿಮ್ಮ ನಿಷ್ಠೆ ಯಶಸ್ಸು ತರಲಿದೆ. ಕೆಲವರ ಟೀಕೆಗೆ ಕಿವಿಗೊಡಬೇಡಿ. ಕೌಟುಂಬಿಕ ಸೌಹಾರ್ದತೆ ಕಾಪಾಡಿ. ಅನವಶ್ಯ ಸಂಘರ್ಷ ತಪ್ಪಿಸಿರಿ.                
ವೃಷಭ
ಕುಟುಂಬ ಸದಸ್ಯರ ಜತೆ ಭಿನ್ನಾಭಿಪ್ರಾಯ. ಅದನ್ನು ಸಮಾಧಾನದಿಂದ ನಿವಾರಿಸಿಕೊಳ್ಳಿ.  ಖರ್ಚು ಅಽಕ.  ಖರೀದಿ ಉತ್ಸಾಹ ಕಡಿಮೆ ಮಾಡಿ.  
ಮಿಥುನ
 ವ್ಯವಹಾರದಲ್ಲಿ  ಆತುರದ ಕ್ರಮ ಬೇಡ. ಅದರಿಂದ ನಿಮಗೇ ಹಾನಿ.  ಕುಟುಂಬಸ್ಥರ ಭಾವನೆ ಗೌರವಿಸಿ.  ಹೊಂದಾಣಿಕೆಯೆ ಒಳಿತು.    
ಕಟಕ
ಕೆಲವು ವಿಚಾರ ಚಿಂತೆಗೆ ಕಾರಣವಾಗಲಿದೆ. ಸುಲಭ ಪರಿಹಾರ ಗೋಚರಿಸದು. ಹಿರಿಯರ ಸಲಹೆಗಳಿಗೆ ಅಸಮಾಧಾನ ಬೇಡ. ಅದನ್ನು ಪಾಲಿಸಿ.
ಸಿಂಹ
ಮನೆಯಲ್ಲಿ  ಭಿನ್ನಾಭಿಪ್ರಾಯ ಸಂಭವ. ಯಾರ ಮೇಲೂ ವೃಥಾ ಆರೋಪ ಹೊರಿಸದಿರಿ. ಎಲ್ಲವನ್ನು ಪರಾಮರ್ಶಿಸಿ ನಿರ್ಧರಿಸಿ. ಧನವ್ಯಯ.
ಕನ್ಯಾ
ಯಾತ್ರೆ, ಸಮಾರಂಭ ಇನ್ನಿತರ ಕಾರಣದಿಂದ ಖರ್ಚು ಹೆಚ್ಚಾಗಬಹುದು. ಕೌಟುಂಬಿಕ ಬಿಕ್ಕಟ್ಟು ಪರಿಹಾರ. ಶಾಂತಿ. ವೃತ್ತಿ ಒತ್ತಡ ನಿವಾರಣೆ.    
ತುಲಾ
ಪ್ರೀತಿಪಾತ್ರರನ್ನು ಕಡೆಗಣಿಸಬೇಡಿ. ಉದ್ಯೋಗದ ಒತ್ತಡ ಬದಿಗಿಟ್ಟು ಅವರೊಂದಿಗೆ ಸಂವಹನ ಸಾಽಸಿ. ಆರ್ಥಿಕ ಉನ್ನತಿ.
ವೃಶ್ಚಿಕ
 ಕೆಲಸದ ಒತ್ತಡದ ಮಧ್ಯೆಯೂ ಕುಟುಂಬ ಸದಸ್ಯರ ಜತೆ  ಕಾಲ ಕಳೆಯುವ ಅವಕಾಶ. ವ್ಯವಹಾರದಲ್ಲಿ ಪ್ರಗತಿ. ಆರ್ಥಿಕ ಲಾಭ.    
ಧನು
 ಯಾವುದೋ ಕೊರಗು. ಹತಾಶೆ. ಅಸಹನೆ. ಇತ್ತೀಚಿನ ಕೆಲ ಬೆಳವಣಿಗೆಗಳು ಇದಕ್ಕೆ ಕಾರಣ. ಸಹನೆಯಿಂದ ನಿಭಾಯಿಸಿ.        
ಮಕರ
ಯಶಸ್ವೀ ದಿನ. ಕಾರ್ಯದಲ್ಲಿ ಯಶಸ್ಸು. ಕೌಟುಂಬಿಕ ತೊಡಕಿನಲ್ಲಿ  ಸಿಲುಕಿಕೊಂಡಿದ್ದರೆ ಇಂದು ನಿರಾಳತೆ ಸಿಗುವುದು. ಧನಪ್ರಾಪ್ತಿ.
ಕುಂಭ
ಸಹೋದ್ಯೋಗಿಗಳ ಜತೆ ಹೊಂದಾಣಿಕೆ ಇರಲಿ. ನಿಮ್ಮ ದಾರಿಯೇ ಸರಿ ಎಂಬ ಕಠಿಣ ಧೋರಣೆ ತರವಲ್ಲ. ಆರ್ಥಿಕ ಬಿಕ್ಕಟ್ಟು ಪರಿಹಾರ ಕಾಣಲಿದೆ.  
 ಮೀನ
ಭವಿಷ್ಯದ ಕುರಿತಂತೆ ಅನಿಶ್ಚಿತತೆ. ಅದರಿಂದ ಮನಸ್ಸಿಗೆ ವ್ಯಾಕುಲ.  ನಿಜವಾಗಿ ಆತಂಕ ಅನವಶ್ಯ. ನಿಮಗೆ ಪೂರಕ ವಾತಾವರಣವಿದೆ.

Must Read