ಬೇಕಾಗುವ ಸಾಮಗ್ರಿಗಳು:
ಮಖಾನಾ
ಬಾದಾಮಿ
ಹಾಲು
ತುಪ್ಪ
ಸಕ್ಕರೆ
ಏಲಕ್ಕಿ ಪುಡಿ
ಕೇಸರಿ
ಗೋಡಂಬಿ, ದ್ರಾಕ್ಷಿ
ಮಾಡುವ ವಿಧಾನ
ಬಾಣಲೆಯಲ್ಲಿ 1 ಚಮಚ ತುಪ್ಪ ಹಾಕಿ, ಮಖಾನಾವನ್ನು ಸಣ್ಣ ಉರಿಯಲ್ಲಿ ಗರಿಗರಿಯಾಗುವವರೆಗೆ 4-5 ನಿಮಿಷ ಹುರಿದು ಪಕ್ಕಕ್ಕೆ ಎತ್ತಿಟ್ಟುಕೊಳ್ಳಿ. ಸಿಪ್ಪೆ ತೆಗೆದ ಬಾದಾಮಿ ಮತ್ತು ಹುರಿದ ಮಖಾನಾದಲ್ಲಿ ಅರ್ಧ ಭಾಗವನ್ನು ಸ್ವಲ್ಪ ಹಾಲು ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ. ಒಂದು ದಪ್ಪ ತಳದ ಪಾತ್ರೆಯಲ್ಲಿ ಹಾಲನ್ನು ಚೆನ್ನಾಗಿ ಕುದಿಸಿ. ಹಾಲು ಸ್ವಲ್ಪ ಗಟ್ಟಿಯಾಗುತ್ತಿದ್ದಂತೆ, ರುಬ್ಬಿಟ್ಟುಕೊಂಡ ಬಾದಾಮಿ-ಮಖಾನಾ ಪೇಸ್ಟ್ ಸೇರಿಸಿ ಚೆನ್ನಾಗಿ ಕೈಯಾಡಿಸಿ. ಈಗ ಉಳಿದ ಇಡೀ ಮಖಾನಾ, ಕೇಸರಿ ಮತ್ತು ಸಕ್ಕರೆ ಸೇರಿಸಿ. ಮಖಾನಾ ಹಾಲನ್ನು ಹೀರಿಕೊಂಡು ಮೆತ್ತಗಾಗುವವರೆಗೆ 5-7 ನಿಮಿಷ ಕುದಿಸಿ. ಕೊನೆಯಲ್ಲಿ ಏಲಕ್ಕಿ ಪುಡಿ ಹಾಗೂ ತುಪ್ಪದಲ್ಲಿ ಹುರಿದ ಗೋಡಂಬಿ-ದ್ರಾಕ್ಷಿ ಸೇರಿಸಿ ಗ್ಯಾಸ್ ಆಫ್ ಮಾಡಿ.
ಈ ಖೀರ್ ಅನ್ನು ಬಿಸಿಯಾಗಿಯೂ ಸವಿಯಬಹುದು ಅಥವಾ ಫ್ರಿಡ್ಜ್ನಲ್ಲಿಟ್ಟು ತಣ್ಣಗೆ ‘ಚಿಲ್ಡ್’ ಮಾಡಿ ಡೆಸರ್ಟ್ ರೂಪದಲ್ಲೂ ಸವಿಯಬಹುದು.



