ಕೆಲವೊಮ್ಮೆ ಚಿನ್ನದ ಉಂಗುರಗಳು ಅಥವಾ ಕಿವಿಯ ಓಲೆ, ಅದರ ತಿರುಪುಗಳನ್ನು ಕಳೆದುಕೊಳ್ಳುತ್ತೇವೆ. ಹಲವು ಬಾರಿ ಕಳೆದುಕೊಂಡ ಚಿನ್ನ ತಕ್ಷಣವೇ ಮತ್ತೆ ಸಿಗುತ್ತದೆ. ಕೆಲವು ಎಷ್ಟು ಹುಡುಕಾಡಿದರೂ ಸಿಗೋದಿಲ್ಲ. ಇದರ ಅರ್ಥ ಏನು?
ಚಿನ್ನ ಕಳೆದುಹೋಗುವುದು ನಕಾರಾತ್ಮಕ ಶಕ್ತಿಗಳನ್ನು ಮತ್ತು ದೈವಬಲದ ಕೊರತೆಯನ್ನು ಸೂಚಿಸುತ್ತದೆ. ಇದು ಶುಭವಲ್ಲ. ಇದರರ್ಥ ನೀವು ಜಾಗೃತರಾಗಿರಬೇಕು ಮತ್ತು ಎಚ್ಚರಿಕೆಯಿಂದಿರಬೇಕು. ನಿಮ್ಮ ಕುಲದೇವರು, ಮನೆದೇವರು ಅಥವಾ ಇಷ್ಟ ದೇವರ ಅನುಗ್ರಹದ ಕೊರತೆಯಿಂದ ಚಿನ್ನ ಕಳೆದುಹೋಗಬಹುದು.
ದಾರಿಯಲ್ಲಿ ಚಿನ್ನ ಸಿಕ್ಕರೆ ಅದು ಅದೃಷ್ಟ ಎಂದು ತೋರಿದರೂ, ಅದನ್ನು ಹೇಗೆ ಬಳಸುತ್ತೀರಿ ಎಂಬುದು ಮುಖ್ಯ. ತಕ್ಷಣ ಒಡವೆ ಮಾಡಿಸಿಕೊಳ್ಳುವುದು ಅಥವಾ ಮಾರಾಟ ಮಾಡುವುದು ಸರಿಯಲ್ಲ. ಅದನ್ನು ಶುದ್ಧೀಕರಿಸಿ, ನಿಮ್ಮ ಬೀರುವ ಅಥವಾ ತಿಜೋರಿಯಲ್ಲಿ ಭದ್ರವಾಗಿ ಇಡುವುದು ಉತ್ತಮ. ಅಥವಾ ಅದನ್ನು ಧರ್ಮಕಾರ್ಯಕ್ಕೆ ಬಳಸಬಹುದು.
ಚಿನ್ನ ಕಳೆದುಕೊಂಡಾಗ ದೈವಾನುಗ್ರಹ ಮತ್ತು ಶನಿ, ರಾಹು, ಕೇತುಗಳ ದೃಷ್ಟಿ ಕೂಡ ಇರಬಹುದು. ಒಟ್ಟಿನಲ್ಲಿ, ಚಿನ್ನ ಸಿಕ್ಕರೂ ಅಥವಾ ಕಳೆದುಕೊಂಡರೂ ಜಾಗೃತಿಯನ್ನು ಹೆಚ್ಚಿಸಿಕೊಳ್ಳುವುದು ಮುಖ್ಯ ಎನ್ನಲಾಗಿದೆ.
ಚಿನ್ನ ಕಳೆದುಹೋದ್ರೆ ಅಥವಾ ಬಿದ್ದು ಸಿಕ್ಕಿದ್ರೆ ಅದರ ಅರ್ಥವೇನು?
