June 21, 2026
Sunday, June 21, 2026
spot_img

ಪಲ್ಯ, ಗ್ರೇವಿ & More 28 | ಅಕ್ಕಿ ರೊಟ್ಟಿ ಜೊತೆಗೆ ಸಬ್ಬಸಿಗೆ ಸೊಪ್ಪಿನ ಪಲ್ಯ ತಿಂತಿದ್ರೆ ಬೇರೆ ಏನೂ ಬೇಡ

ಸಬ್ಬಸಿಗೆ ಸೊಪ್ಪು (Dill leaves) ಆರೋಗ್ಯಕ್ಕೆ ತುಂಬಾ ಒಳ್ಳೆಯ ಹಸಿರು ತರಕಾರಿಗಳಲ್ಲೊಂದು. ಇದರಲ್ಲಿ ಐರನ್, ಕ್ಯಾಲ್ಸಿಯಂ ಹಾಗೂ ವಿಟಮಿನ್‌ಗಳು ಸಮೃದ್ಧವಾಗಿವೆ. ಸಬ್ಬಸಿಗೆ ಸೊಪ್ಪಿನಿಂದ ಮಾಡಬಹುದಾದ ಪಲ್ಯ ತುಂಬಾ ಸುವಾಸನೆಯಾಗಿದ್ದು ಅನ್ನ, ರೊಟ್ಟಿ ಅಥವಾ ಚಪಾತಿಯ ಜೊತೆಗೆ ತಿನ್ನಲು ಬಹಳ ರುಚಿಯಾಗಿರುತ್ತೆ. ಮನೆಯಲ್ಲೇ ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ಈ ಪಲ್ಯವನ್ನು ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು

ಸಬ್ಬಸಿಗೆ ಸೊಪ್ಪು – 1 ಕಟ್ಟು
ಈರುಳ್ಳಿ – 1
ಹಸಿಮೆಣಸು – 2
ಸಾಸಿವೆ – ½ ಟೀ ಸ್ಪೂನ್
ಉದ್ದಿನ ಬೇಳೆ – 1 ಟೀ ಸ್ಪೂನ್
ಅರಿಶಿನ ಪುಡಿ – ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ತುರಿದ ತೆಂಗಿನಕಾಯಿ – 2 ಟೇಬಲ್ ಸ್ಪೂನ್
ಎಣ್ಣೆ – 1 ಟೇಬಲ್ ಸ್ಪೂನ್

ಮಾಡುವ ವಿಧಾನ

ಮೊದಲು ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಎಣ್ಣೆ ಬಿಸಿ ಆದ ಬಳಿಕ ಸಾಸಿವೆ ಹಾಕಿ ನಂತರ ಉದ್ದಿನ ಬೇಳೆ ಮತ್ತು ಹಸಿಮೆಣಸು ಹಾಕಿ ಸ್ವಲ್ಪ ಹೊತ್ತು ಹುರಿಯಿರಿ.

ನಂತರ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಸ್ವಲ್ಪ ಹೊತ್ತು ಬಣ್ಣ ಬದಲಾಗುವವರೆಗೆ ಫ್ರೈ ಮಾಡಬೇಕು. ಈಗ ಅರಿಶಿನ ಪುಡಿ ಮತ್ತು ಕತ್ತರಿಸಿದ ಸಬ್ಬಸಿಗೆ ಸೊಪ್ಪನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.

ಇದಕ್ಕೆ ಉಪ್ಪು ಸೇರಿಸಿ ಮುಚ್ಚಿ ಕಡಿಮೆ ಉರಿಯಲ್ಲಿ 5–7 ನಿಮಿಷ ಬೇಯಲು ಬಿಡಿ. ಸೊಪ್ಪು ಚೆನ್ನಾಗಿ ಬೆಂದ ಬಳಿಕ ಕೊನೆಯಲ್ಲಿ ತುರಿದ ತೆಂಗಿನಕಾಯಿ ಹಾಕಿ ಮಿಕ್ಸ್ ಮಾಡಿದರೆ ರುಚಿಕರ ಸಬ್ಬಸಿಗೆ ಸೊಪ್ಪಿನ ಪಲ್ಯ ಸಿದ್ಧವಾಗುತ್ತೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !