October 14, 2026
Wednesday, October 14, 2026
spot_img

ಉಳಿದ ಅವಲಕ್ಕಿಯಲ್ಲಿ ಟ್ರೈ ಮಾಡಿ ಸೂಪರ್ ಕ್ರಿಸ್ಪಿ ‘ಪೋಹಾ ನಗ್ಗೆಟ್ಸ್’.. ಟೇಸ್ಟ್ ಮಾತ್ರ ನೆಕ್ಸ್ಟ್ ಲೆವೆಲ್

ಬೇಕಾಗುವ ಸಾಮಗ್ರಿಗಳು:

ಗಟ್ಟಿ ಅವಲಕ್ಕಿ

ಆಲೂಗಡ್ಡೆ

ಈರುಳ್ಳಿ

ಹಸಿಮೆಣಸಿನಕಾಯಿ ಪೇಸ್ಟ್

ಶುಂಠಿ-ಬೆಳ್ಳುಳ್ಳಿ ಪೇಸ್ಟ್

ಕೊತ್ತಂಬರಿ ಸೊಪ್ಪು

ಖಾರದ ಪುಡಿ, ಗರಂ ಮಸಾಲ, ಜೀರಿಗೆ ಪುಡಿ

ಕಾರ್ನ್ ಫ್ಲೋರ್

ಉಪ್ಪು

ಎಣ್ಣೆ

ಮಾಡುವ ವಿಧಾನ:

ಅವಲಕ್ಕಿಯನ್ನು 2 ಬಾರಿ ನೀರಿನಲ್ಲಿ ಚೆನ್ನಾಗಿ ತೊಳೆದು, 5 ನಿಮಿಷ ಪಕ್ಕಕ್ಕೆ ಇಡಿ. ನೀರೆಲ್ಲಾ ಬಸಿದು ಅವಲಕ್ಕಿ ಮೆತ್ತಗಾಗಲಿ. ಮೆತ್ತಗಾದ ಅವಲಕ್ಕಿಯನ್ನು ಕೈಯಿಂದ ಚೆನ್ನಾಗಿ ಹಿಸುಕಿ. ಅದಕ್ಕೆ ಬೇಯಿಸಿದ ಆಲೂಗಡ್ಡೆ, ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಎಲ್ಲಾ ಮಸಾಲೆ ಪುಡಿಗಳನ್ನು ಸೇರಿಸಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕಾರ್ನ್ ಫ್ಲೋರ್ ಸೇರಿಸಿ, ನೀರು ಹಾಕದೆ ಗಟ್ಟಿಯಾಗಿ ಕಲಸಿಕೊಳ್ಳಿ. ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು, ಕಲಸಿದ ಹಿಟ್ಟಿನಿಂದ ಸಣ್ಣ ಸಣ್ಣ ಚೌಕ ಅಥವಾ ನಗ್ಗೆಟ್ಸ್ ಆಕಾರಗಳನ್ನು ಮಾಡಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಮಧ್ಯಮ ಉರಿಯಲ್ಲಿ ಈ ನಗ್ಗೆಟ್ಸ್‌ಗಳನ್ನು ಗೋಲ್ಡನ್ ಬ್ರೌನ್ ಬರುವವರೆಗೆ ಗರಿಗರಿಯಾಗಿ ಕರಿಯಿರಿ.

ಈಗ ಬಿಸಿಬಿಸಿಯಾದ ಪೋಹಾ ನಗ್ಗೆಟ್ಸ್ ಅನ್ನು ಟೊಮೆಟೊ ಕೆಚಪ್ ಅಥವಾ ಖಾರವಾದ ಪುದೀನಾ ಚಟ್ನಿ ಹಾಗೂ ಒಂದು ಕಪ್ ಬಿಸಿ ಚಹಾ ಜೊತೆ ಸವಿಯಿರಿ.

Must Read