October 15, 2026
Thursday, October 15, 2026
spot_img

ಲಡಾಖ್‌ನಲ್ಲಿ ಅಭಿವೃದ್ಧಿ ಪರ್ವ: ಹೊಸ ವಿಮಾನ ನಿಲ್ದಾಣದ ಟರ್ಮಿನಲ್‌ ಸೇರಿ 5 ಯೋಜನೆಗಳಿಗೆ ಚಾಲನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಧಾನಿ ನರೇಂದ್ರ ಮೋದಿ ಲಡಾಕ್‌ಗೆ 3,350 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಕೊಡುಗೆಯಾಗಿ ನೀಡಿದ್ದು, ಇಂದು ಐದು ಪ್ರಮುಖ ಯೋಜನೆಗಳಿಗೆ ವರ್ಚ್ಯುಯಲ್‌ ಮೂಲಕ ಉದ್ಘಾಟನೆ ನೆರವೇರಲಿದೆ.

ಲೇಹ್‌ನ ಕುಶೋಕ್ ಬಕುಲಾ ರಿಂಪೋಚಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಅನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. 640 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಆಧುನಿಕ ಟರ್ಮಿನಲ್ 23,800 ಚದರ ಮೀಟರ್ ವಿಸ್ತೀರ್ಣ ಹೊಂದಿದೆ. ವಾರ್ಷಿಕವಾಗಿ 35 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನ ಈ ಟರ್ಮಿನಲ್ ಹೊಂದಿದೆ.

ಇದರ ಜೊತೆಗೆ ರಸ್ತೆ ಸಂಪರ್ಕ, ನವೀಕರಿಸಬಹುದಾದ ಇಂಧನ, ಪರಂಪರೆ ಸಂರಕ್ಷಣೆ ಹಾಗೂ ಜಲ ಭದ್ರತೆಗೆ ಆದ್ಯತೆ ನೀಡಲಾಗಿದೆ. ಈ ಬಗ್ಗೆ ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದು, ಲೇಹ್‌ನ ಕುಶೋಕ್‌ ಬಕುಲ ರಿಂಪೋಚೆ ವಿಮಾನದ ಹೊಸ ಟರ್ಮಿನಲ್‌, ನಿಮ್ಮು ಪದುಮ್‌ ದಾರ್ಚಾ ರಸ್ತೆ, 9 ಮೆಗಾವ್ಯಾಟ್ ಸಾಮರ್ಥ್ಯದ ಹನು ಜಲವಿದ್ಯುತ್ ಯೋಜನೆ ಮತ್ತು ವಿದ್ಯುತ್ ಪ್ರಸರಣ ಮೂಲಸೌಕರ್ಯ, ಭಾರತದ ಮೊದಲ ಪೆಟ್ರೋಗ್ಲಿಫ್‌, ಪ್ರಾಜೆಕ್ಟ್‌ ಅಮೃತ್‌ ಹಿಮ್‌ ಸರೋವರದ ಅನ್ವಯ ಅಡಿಯಲ್ಲಿ 40 ಹಳ್ಳಿಗಳಲ್ಲಿ ಜಲಮೂಲಗಳನ್ನು ಉದ್ಘಾಟನೆ ಮಾಡಲಾಗುತ್ತದೆ. ಈ ಯೋಜನೆಗಳು ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುತ್ತವೆ, ಅಭಿವೃದ್ಧಿಗೆ ಉತ್ತೇಜನ ನೀಡುತ್ತವೆ, ಶ್ರೀಮಂತ ಪರಂಪರೆಯನ್ನು ಸಂರಕ್ಷಿಸುತ್ತವೆ ಮತ್ತು ಜನರ ಜೀವನಮಟ್ಟವನ್ನು ಸುಧಾರಿಸುತ್ತವೆ ಎಂದು ಹೇಳಿದ್ದಾರೆ.

Must Read