ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ವಿವಾದಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಫೋಟೊ ಪ್ರೂಫ್ ನೀಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
ಎಚ್ಡಿಕೆ ಅವರು ಸ್ಟಿಂಗ್ ಆಪರೇಷನ್ ಮಾಡಿದ ವ್ಯಕ್ತಿಯ ಫೋಟೊವನ್ನು ಬೆಂಗಳೂರಿನ ಪೊಲೀಸ್ ಆಯುಕ್ತರ ಕಚೇರಿಯಲ್ಲಿಯೇ ಬಿಡುಗಡೆ ಮಾಡಿದ್ದಾರೆ. ಜೆಡಿಎಸ್ ಕಾರ್ಯಕರ್ತರನ್ನಯ ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರ ಕಚೇರಿ ಆಗಮಿಸಿದ ಕುಮಾರಸ್ವಾಮಿ ಬಾಗೇಪಲ್ಲಿ ಮೂಲದ ಪ್ರಶಾಂತ್ ಫೋಟೋವನ್ನು ರಿಲೀಸ್ ಮಾಡಿದ್ದಾರೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಜೊತೆಗಿರುವ ರೌಡಿಶೀಟರ್ ಫೋಟೋ ಬಿಡುಗಡೆ ಮಾಡಿದ ಹೆಚ್ಡಿಕೆ, ಸರ್ಕಾರದ ವಿರುದ್ಧ ರಾಜಕೀಯ ಷಡ್ಯಂತ್ರದ ಗಂಭೀರ ಆರೋಪ ಮಾಡಿದ್ದಾರೆ. ಸುರ್ಜೇವಾಲಾ ಜೊತೆಗೆ ರೌಡಿಶೀಟರ್ ಪ್ರಶಾಂತ್ ನಿಂತಿದ್ದಾರೆ. ಆತ್ಮೀಯವಾಗಿ ಹೆಗಲ ಮೇಲೆ ಕೈ ಹಾಕಿದ್ದಾರೆ. ಈತನನ್ನು ವಶಕ್ಕೆ ಪಡೆದು ಬೆದರಿಸಿ ನನ್ನ ಹೆಸರು ಹೇಳಿಸುವುದು ಇವರ ಪ್ಲಾನ್ ಆಗಿದೆ ಎಂದಿದ್ದಾರೆ.
ನಿಜವಾದ 420ಗಳು ವಿಧಾನಸೌಧದ ಒಳಗೆ ಇದ್ದಾರೆ. ಆದರೆ ನಮ್ಮನ್ನು ತನಿಖೆ ಮಾಡುತ್ತಾರಂತೆ! ಅಧಿಕಾರ ಇದೆ ಎಂದು ಹೇಗೆ ಬೇಕು ಹಾಗೆ ಬಳಸುವುದು ಸರಿಯಾ? ಗೃಹ ಸಚಿವರು ನಾಲಿಗೆ ಮೇಲೆ ಹಿಡಿತ ಇಟ್ಟುಕೊಂಡು ಮಾತನಾಡಲಿ ಎಂದು ಗರಂ ಆಗಿದ್ದಾರೆ.



