ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುವತಿಯೊಬ್ಬಳು ತನ್ನ ಗೆಳೆಯನ ಮನೆಯ ಮುಂದೆ ಕುಳಿತು ಪ್ರತಿಭಟನೆ ನಡೆಸಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಹನುಮನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಆತ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ. ಮದುವೆಯಾಗು ಎಂದರೆ ನನ್ನ ಬಳಿ ಜಾತಿ ಕಥೆ ಎತ್ತಿ ನನ್ನ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ ಎನ್ನಲಾಗಿದೆ. ಮಾಲೂರು ತಾಲೂಕಿನ ಚಿಕ್ಕಕಡತೂರು ಗ್ರಾಮದ ಶಿವರಂಜಿನಿ ಹಾಗೂ ಹನುಮನಾಯಕನಹಳ್ಳಿಯ ಗ್ರಾಮದ ಪೃಥ್ವಿರಾಜ್ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಪೃಥ್ವಿ ಮದುವೆಯಾಗುವುದಾಗಿ ಹೇಳಿದ್ದ ಆದರೆ ಈಗ ಮದುವೆ ಬೇಡ ಎನ್ನುತ್ತಿದ್ದಾನೆ. ಇನ್ಸ್ಟಾಗ್ರಾಮ್ ಮೂಲಕ ನಮ್ಮ ಪರಿಚಯವಾಗಿತ್ತು. ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಪೃಥ್ವಿ ಜೀವನವಿಡೀ ಒಟ್ಟಿಗೇ ಇರೋಣ ಎಂದಿದ್ದ. ಈಗ ಮದುವೆ ಬೇಡ ಎನ್ನುತ್ತಿದ್ದಾರೆ ಎಂದು ಶಿವರಂಜನಿ ಅವರ ಆರೋಪವಾಗಿದೆ.
ಯುವತಿ ಪ್ರತಿಭಟನೆ ನಡೆಸುತ್ತಿರುವ ಮಾಹಿತಿ ತಿಳಿದ ಮಾಲೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಅಧಿಕೃತ ಹೇಳಿಕೆ ಹಾಗೂ ಮುಂದಿನ ತನಿಖೆಯ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿವೆ. ಯುವತಿ ಮಾಡಿರುವ ಆರೋಪಗಳ ಬಗ್ಗೆ ಪೃಥ್ವಿರಾಜ್ ಅವರ ಪ್ರತಿಕ್ರಿಯೆ ಕೂಡ ಲಭ್ಯವಾಗಿಲ್ಲ.



