ಹೊಸದಿಗಂತ ಡಿಜಿಟಲ್ ಡೆಸ್ಕ್:
30 ವರ್ಷದ ಯುವತಿಗೆ 75 ವರ್ಷದ ತಾತನ ಮೇಲೆ ಪ್ರೀತಿಯಾಗಿದೆ. ಹಬ್ಬದ ಬಳಿಕ ಮದುವೆಯಾಗ್ತೀವಿ ಎಂದು ಯುವತಿ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಯಸ್ಸು 30 ಆದರೂ ಹೆಣ್ಣು ಸಿಗುತ್ತಿಲ್ಲ ಎಂದು ಯುವಕರು ಕಣ್ಣೀರಿಡುವ ಪರಿಸ್ಥಿತಿ ಇದೆ. ಈ ವೇಳೆ 75ರ ತಾತನಿಗೆ ಯುವತಿಯನ್ನು ಮದುವೆಯಾಗುವ ಭಾಗ್ಯ ಸಿಕ್ಕಿದ್ದಕ್ಕೆ ಬ್ಯಾಚುಲರ್ಸ್ ಹೊಟ್ಟೆ ಉರಿದುಕೊಂಡಿದ್ದಾರೆ.
https://www.instagram.com/reel/DeVzfSDuBW8/?utm_source=ig_embed&ig_rid=Afp7MHIwCY4TTXbg5guax6a
ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ಇರುವ ರೀನಾ ಹಾಗೂ ರಾಮ್ ಸಾಗರ್ ವಿಭಿನ್ನ ಪ್ರೇಮಿಗಳು. ಕಂಟೆಂಟ್ ಕ್ರಿಯೇಟರ್ ಆಗಿ ಗುರುತಿಸಿಕೊಂಡಿರುವ ರೀನಾ 75 ವರ್ಷದ ರಾಮ್ ಸಾಗರ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಹಬ್ಬದ ನಂತರ ಮದುವೆಯಾಗುವುದಾಗಿ ಹೇಳಿಕೊಂಡಿದ್ದಾರೆ.
https://www.instagram.com/reel/DeXAbI8vTMq/?utm_source=ig_embed&ig_rid=AE0e8dYqBGS8FyeU5R4Obwx
ಆರು ದಿನಗಳ ಹಿಂದೆ ನಿಶ್ಚಿತಾರ್ಥವಾಗಿದ್ದು, ಅದರ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ತಾತನಿಗೆ ಹುಡುಗಿ ಸಿಕ್ಕಿದ್ದು ಹೇಗೆ? ಪ್ರೀತಿ ಆಗಿದ್ದು ಹೇಗೆ ಎನ್ನುವ ಬಗ್ಗೆ ನೆಟ್ಟಿಗರು ಭಾರೀ ಕುತೂಹಲ ವ್ಯಕ್ತಪಡಿಸಿದ್ದಾರೆ.ಇವರಿಬ್ಬರ ನಡುವಿನ 45 ವರ್ಷಗಳ ವಯಸ್ಸಿನ ಅಂತರವನ್ನ ಕಂಡು ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗಳು ಹುಟ್ಟಿಕೊಂಡಿವೆ. ಆದರೆ, ಈ ಎಲ್ಲ ಚರ್ಚೆಗಳ ನಡುವೆಯೂ ರೀನಾ ತಮ್ಮ ನಿರ್ಧಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ರಾಮ್ ಸಾಗರ್ ಜೊತೆಗೆ ತಾವು ಸಂತೋಷವಾಗಿದ್ದು, ವಯಸ್ಸಿನ ಅಂತರ ತಮ್ಮ ಸಂಬಂಧಕ್ಕೆ ಅಡ್ಡಿಯಾಗಿಲ್ಲ ಎಂದಿದ್ದಾರೆ.
ಹಣಕ್ಕಾಗಿ ಮದುವೆಯಾಗುತ್ತಿರಬೇಕು, ತಾತ ಮೊಮ್ಮಗಳ ಹಾಗೆ ಕಾಣಿಸುತ್ತಿದ್ದಾರೆ ಎಂದು ಜನ ಕಮೆಂಟ್ ಮಡುತ್ತಿದ್ದಾರೆ. ಇದ್ಯಾವುಕ್ಕೂ ರೀನಾ ಉತ್ತರ ನೀಡದೇ ತಾವು ಸಂತೋಷವಾಗಿದ್ದೀವಿ ಎಂದು ಪೋಸ್ಟ್ ಮೂಲಕ ಹೇಳಿಕೊಂಡಿದ್ದಾರೆ.



