October 16, 2026
Friday, October 16, 2026
spot_img

ರಾಮನ ಪಾತ್ರಕ್ಕೆ ರಣ್‌ಬೀರ್‌ರನ್ನು ದೇವರೇ ಆಯ್ಕೆ ಮಾಡಿದ್ದಾರೆ : ಸಮರ್ಥನೆ ಮಾಡಿಕೊಂಡ ನಟ ಯಶ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನವೆಂಬರ್‌ ಐದರಂದು ಬಾಲಿವುಡ್‌ನ ಬಹುನಿರೀಕ್ಷಿತ ರಾಮಾಯಣ ಸಿನಿಮಾ ರಿಲೀಸ್‌ ಆಗಲಿದೆ. ರಾಮಾಯಣ ಸಿನಿಮಾದಲ್ಲಿ ರಾಮನ ಪಾತ್ರಕ್ಕೆ ರಣ್‌ಬೀರ್‌ ಕಪೂರ್‌ ಅವರನ್ನು ಆಯ್ಕೆ ಮಾಡಿದ ದಿನದಿಂದಲೂ ಜನ ನೆಗೆಟಿವ್‌ ಕಮೆಂಟ್ಸ್‌ ಮಾಡುತ್ತಿದ್ದಾರೆ.

ರಾಮನ ಪಾತ್ರಕ್ಕೆ ರಣ್‌ಬೀರ್‌ ಸೂಟ್‌ ಆಗೋದಿಲ್ಲ. ಕನ್ವಿನ್ಸ್‌ ಆಗ್ತಾ ಇಲ್ಲ ಎಂದೆಲ್ಲಾ ಹೇಳುತ್ತಿದ್ದಾರೆ. ರಣ್‌ಬೀರ್‌ ಬದಲು ವಿಕ್ಕಿ ಕೌಶಲ್‌ ರಾಮನ ಪಾತ್ರವನ್ನು ಅದ್ಭುತವಾಗಿ ಮಾಡುತ್ತಿದ್ದರು. ರಣ್‌ಬೀರ್‌ ಮುಖದಲ್ಲಿ ರಾಮನ ಕಳೆ ಇಲ್ಲ ಎಂದು ಜನರು ಹೇಳಿದ್ದಾರೆ. ಈ ಮಧ್ಯೆ ನಟ ಯಶ್‌ ರಣ್‌ಬೀರ್‌ ಬಗ್ಗೆ ಮಾತನಾಡಿದ್ದಾರೆ. ರಾಮನ ಪಾತ್ರದಲ್ಲಿ ರಣ್‌ಬೀರ್‌ ಹೊರತುಪಡಿಸಿ ಇನ್ಯಾರನ್ನೂ ಇಮ್ಯಾಜಿನ್‌ ಮಾಡಲು ಆಗುವುದಿಲ್ಲ. ರಾಮ ಹಾಗೂ ರಾವಣನ ಪಾತ್ರಕ್ಕೆ ನಾವು ಆಯ್ಕೆಯಾಗಿಲ್ಲ. ದೇವರೇ ನಮ್ಮನ್ನು ಈ ಪಾತ್ರಕ್ಕೆ ಆಯ್ಕೆ ಮಾಡಿದ್ದಾರೆ.

ರಣ್‌ಬೀರ್‌ ತುಂಬಾ ಹಾನೆಸ್ಟ್‌ ವ್ಯಕ್ತಿ, ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಶ್ರದ್ಧೆಯಿಂದ ಪಾತ್ರವನ್ನು ನಿಭಾಯಿಸಿದ್ದಾರೆ. ನಾನು ಸ್ಟಾರ್‌ ಎನ್ನುವ ಅಹಂ ಇಲ್ಲ. ತುಂಬಾ ಸರಳ ಜೀವಿ ಎಂದು ಹೇಳಿ ಟ್ರೋಲ್‌ ಮಾಡುವವರ ಬಾಯಿ ಮುಚ್ಚಿಸಿದ್ದಾರೆ.

Must Read