October 16, 2026
Friday, October 16, 2026
spot_img

ಇದು ಈ ವರುಷದ ಬೆಸ್ಟ್ ಸಿನಿಮಾ: ವಿಶ್ವಾಸ ವ್ಯಕ್ತಪಡಿಸಿದ ನಟ ವಿಜಯ್ ದೇವರಕೊಂಡ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಾಲಿವುಡ್‌ನ ಜನಪ್ರಿಯ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಯ ಬಳಿಕ ಒಟ್ಟಿಗೆ ನಟಿಸಿರುವ ಬಹುನಿರೀಕ್ಷಿತ ‘ರಣಬಾಲಿ’ ಸಿನಿಮಾ ಅದ್ದೂರಿಯಾಗಿ ತೆರೆಕಂಡಿದೆ. ಬ್ರಿಟಿಷರ ಕಾಲದ ಕಥೆ ಹಾಗೂ ಫ್ಯಾಷನ್ ಹಿನ್ನೆಲೆಯನ್ನು ಹೊಂದಿರುವ ಈ ಐತಿಹಾಸಿಕ ಚಿತ್ರದ ಮೇಲೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆಯಿತ್ತು. ಸಿನಿಮಾ ರಿಲೀಸ್ ಬಳಿಕ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಚಿತ್ರತಂಡ ಶುಕ್ರವಾರ ಸಂಜೆ ಯಶಸ್ವಿ ಸಕ್ಸೆಸ್ ಮೀಟ್ ನಡೆಸಿದೆ.

ವೇದಿಕೆ ಮೇಲೆ ಮಾತನಾಡಿದ ನಟ ವಿಜಯ್ ದೇವರಕೊಂಡ, ಚಿತ್ರದ ಬಗ್ಗೆ ಮೆಚ್ಚುಗೆಯ ಮಳೆಗೈದಿದ್ದಾರೆ. “ನಾನು ನನ್ನ ವೃತ್ತಿಜೀವನದಲ್ಲಿ 14 ಸಿನಿಮಾಗಳನ್ನು ಮಾಡಿದ್ದೇನೆ. ಆದರೆ ಮುಂದೆ ನಾನು 25 ರಿಂದ 30 ಚಿತ್ರಗಳನ್ನು ಮಾಡಿದರೂ, ‘ರಣಬಾಲಿ’ ಮಾತ್ರ ನನ್ನ ಕೆರಿಯರ್‌ನಲ್ಲಿ ಅತ್ಯಂತ ವಿಶೇಷವಾಗಿ ನಿಲ್ಲುತ್ತದೆ. ಇದು ಈ ವರ್ಷದ ಅತ್ಯುತ್ತಮ ತೆಲುಗು ಚಿತ್ರಗಳಲ್ಲಿ ಒಂದಾಗಲಿದೆ ಎಂಬ ನಂಬಿಕೆ ನನಗೆ ನಿನ್ನೆ ಚಿತ್ರ ನೋಡಿದಾಗಲೇ ಬಂದಿತು” ಎಂದು ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ.

ಇನ್ನೊಂದೆಡೆ, ಸಿನಿಮಾ ಬಿಡುಗಡೆಗೂ ಮುನ್ನವೇ ಚಿತ್ರದ ವಿರುದ್ಧ ಹಬ್ಬುತ್ತಿದ್ದ ಸುಳ್ಳು ಹಾಗೂ ಅಪಪ್ರಚಾರದ ಸುದ್ದಿಗಳಿಗೆ ಕಡಿವಾಣ ಹಾಕಲು ಬೆಂಗಳೂರು ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶ ಹರಡುವುದಕ್ಕೆ ತಡೆಯಾಜ್ಞೆ ನೀಡಲಾಗಿದೆ. ಇದರ ಬೆನ್ನಲ್ಲೇ ‘ಬುಕ್‌ಮೈಶೋ’ ವೇದಿಕೆಯಲ್ಲಿ ಈ ಸಿನಿಮಾದ ವಿಮರ್ಶೆ ಹಾಗೂ ರೇಟಿಂಗ್‌ಗಳನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಲಾಗಿದೆ. ಏನೇ ಆದರೂ, ವಿಜಯ್-ರಶ್ಮಿಕಾ ಜೋಡಿಯ ಈ ಪ್ರಯತ್ನ ಸಿನಿಪ್ರಿಯರ ವಲಯದಲ್ಲಿ ಸದ್ದು ಮಾಡುತ್ತಿದೆ.

Must Read