October 17, 2026
Saturday, October 17, 2026
spot_img

ರಾಜಧಾನಿ ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಮಳೆ : ನೀರಿನಲ್ಲಿ ತೇಲಿದ ಬಿಳಿ ಕಾರು, ವಿಡಿಯೋ ವೈರಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯವಸ್ಥವಾಗಿದೆ. ಪಣತ್ತೂರಿನ ರೈಲ್ವೆ ಅಂಡರ್‌ಪಾಸ್‌ನಲ್ಲಿ ನೀರು ಹರಿದುಹೋಗಲು ಮಾರ್ಗವಿಲ್ಲದೇ ಮಣ್ಣು ತುಂಬಿದ್ದು, ಕಾರು ನೀರಿನಲ್ಲಿ ತೇಲಿದೆ.

ಈ ಸ್ಥಳದಲ್ಲಿ ನೀರು ಹೋಗಲು ಸ್ಥಳವೇ ಇಲ್ಲದಂತಾಗಿದ್ದು, ಕಾರು ಸಿಲುಕೊಂಡಿದೆ. ಮಳೆ ನೀರು ಹೆಚ್ಚಾದಂತೆ ಕಾರು ನೀರಿನಲ್ಲಿ ತೇಲಿದೆ. ಸ್ವಲ್ಪ ನೀರು ಬರುತ್ತಿದ್ದಂತೆಯೇ ಚಾಲಕ ಹಾಗೂ ಪ್ರಯಾಣಿಕ ಕಾರಿನಿಂದ ಇಳಿದು ಪಾರಾಗಿದ್ದಾರೆ.

ಮತ್ತದೇ ಸ್ಥಳದಲ್ಲಿ ಬೈಕ್‌ ಸವಾರನೊಬ್ಬ ಸಿಲುಕಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿದ್ದು, ಜನರು ಮನೆ ಸೇರೋದಕ್ಕೆ ಪರದಾಡಿದ್ದಾರೆ.

ಚಾಮರಾಜಪೇಟೆಯಲ್ಲಿ ಮಳೆಯ ರೌದ್ರನರ್ತನಕ್ಕೆ ಮಳಿಗೆಗಳಿಗೆ ಮಳೆ ನೀರು ನುಗ್ಗಿದೆ. ಜ್ಯುವೆಲ್ಲರಿ, ಟೈಲರಿಂಗ್, ಟ್ಯಾಟೂ ಹಾಗೂ ಗಿಫ್ಟ್ ಶಾಪ್ ಸೇರಿದಂತೆ ಒಟ್ಟು 7 ಅಂಗಡಿಗಳಿಗೆ ನೀರು ಹೊಕ್ಕ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾನಿಗೊಳಗಾಗಿವೆ. ಇತ್ತ ದಾಸರಹಳ್ಳಿ, ಬಾಗಲಗುಂಟೆ, ಚಿಕ್ಕಬಾಣಾವರ, ಸೋಲದೇವನಹಳ್ಳಿ ಹಾಗೂ ಮಾದನಾಯಕನಹಳ್ಳಿಯಲ್ಲಿ ಸಂಜೆ ಮಳೆಗೆ ಸವಾರರು ರಸ್ತೆ ಬದಿಯಲ್ಲೇ ವಾಹನಗಳನ್ನು ನಿಲ್ಲಿಸಿ ಆಶ್ರಯ ಪಡೆಯುವಂತಾಯಿತು.

Must Read