ಮೇಷ
ಒದಗಿ ಬರುವ ಅವಕಾಶ ಚೆನ್ನಾಗಿ ಬಳಸಿಕೊಳ್ಳಿ. ವೃತ್ತಿ ಕ್ಷೇತ್ರದಲ್ಲಿ ಸಣ್ಣ ಅಸಂತೃಪ್ತಿ ಮೂಡಲಿದೆ. ಕಡೆಗಣಿಸಿದ ಭಾವ ಕಾಡಲಿದೆ.
ವೃಷಭ
ಕಠಿಣ ಪರಿಶ್ರಮದ ಫಲ ಸಿಗಲಿದೆ. ಉದ್ಯೋಗ ಹುಡುಕುವವರಿಗೆ ಶುಭಸುದ್ದಿ. ಕೌಟುಂಬಿಕ ಉದ್ವಿಗ್ನತೆ ನಿವಾರಣೆ. ಹೂಡಿಕೆಯಿಂದ ಲಾಭ.
ಮಿಥುನ
ನಿಮ್ಮ ನಡೆನುಡಿ ಎಲ್ಲರ ಗಮನ ಸೆಳೆಯಲಿದೆ. ವೃತ್ತಿಯಲ್ಲಿ ಸಫಲತೆ. ಪ್ರೀತಿಯ ವಿಷಯದಲ್ಲಿ ನಿರಾಶೆ ಉಂಟಾದೀತು. ದೇಹಾಲಸ್ಯ ಸಂಭವ.
ಕಟಕ
ಆಪ್ತರ ಜತೆ ಭಿನ್ನಾಭಿಪ್ರಾಯ ಸಂಭವ. ಎದುರಾಡಬೇಡಿ. ಸಹನೆ ಕಾಯ್ದುಕೊಳ್ಳಿ. ಹಣದ ಹರಿವಿಗೆ ತಡೆ ಒದಗೀತು. ಖರ್ಚು ಕಡಿಮೆ ಮಾಡಿ.
ಸಿಂಹ
ತೃಪ್ತಿಕರ ಬೆಳವಣಿಗೆ. ಸಂಘಟಿತ ಕಾರ್ಯದಲ್ಲಿ ಸಫಲತೆ. ಕೊಟ್ಟ ಹಣ ಮರಳಿ ಸಿಗಲಿದೆ. ಪ್ರೀತಿಪಾತ್ರರ ಜತೆ ಹೆಚ್ಚು ಕಾಲ ಕಳೆಯಿರಿ.
ಕನ್ಯಾ
ನಿಮ್ಮಿಷ್ಟದವರ ಪ್ರೀತಿ ಗಳಿಸುವ ಯತ್ನ ಸಫಲ. ಹಾಗೆಂದು ನಿಮ್ಮ ಗುರಿ ಮರೆಯಬೇಡಿ. ಬಂಧುಗಳ ಕಿರಿಕಿರಿ. ಧನವ್ಯಯ ಹೆಚ್ಚಲಿದೆ.
ತುಲಾ
ನಿಮ್ಮ ಪಾಂಡಿತ್ಯ ದಿಂದ ಗಮನ ಸೆಳೆಯುವಿರಿ. ಖಾಸಗಿ ಮತ್ತು ವೃತ್ತಿ ಬದುಕು ತೃಪ್ತಿಕರ. ಅಜೀರ್ಣದ ಸಮಸ್ಯೆ ಹೊಟ್ಟೆ ಕೆಡಿಸೀತು.
ವೃಶ್ಚಿಕ
ನಿಮ್ಮ ಬಿಕ್ಕಟ್ಟಿಗೆ ಸಂಬಂಧಿಸಿ ಯುಕ್ತ ಸಲಹೆ ಬಂದರೆ ಸ್ವೀಕರಿಸಿ. ಹಠ ಸ್ವಭಾವ ತೋರದಿರಿ. ಹೊಂದಿಕೊಂಡು ನಡೆಯುವುದು ಒಳಿತು.
ಧನು
ಅಧಿಕ ಕೆಲಸದಿಂದ ಆರೋಗ್ಯ ಕೆಡಬಹುದು. ಆದಾಯದಲ್ಲಿ ಹೆಚ್ಚಳ. ಉದ್ಯೋಗದಲ್ಲಿ ಪೂರಕ ಬೆಳವಣಿಗೆ. ನಿಮ್ಮ ಮಾತಿಗೆ ಬೆಲೆ ಸಿಗಲಿದೆ.
ಮಕರ
ಕೆಲಸದಲ್ಲಿ ಹೆಚ್ಚು ಪರಿಶ್ರಮ ಬೇಕಾಗುವುದು. ಹಣ ಹೂಡಿಕೆಯಿಂದ ಲಾಭ ಸಿಗಲಿದೆ. ಕೇಡು ಬಯಸುವವರ ಕುರಿತಂತೆ ಒಂದು ಕಣ್ಣಿಡಿ.
ಕುಂಭ
ಎಲ್ಲರ ಜತೆಗಿನ ಸಂಬಂಧ ಚೆನ್ನಾಗಿಡಿ. ಕೆಡುಕು ಮಾತು ಬಿಡಿ. ಸಂಗಾತಿ ಜತೆಗೆ ಸಾಮರಸ್ಯ ಕಾಯ್ದುಕೊಳ್ಳಿ. ಮಕ್ಕಳ ಸಾಧನೆಯಿಂದ ತೃಪ್ತಿ.
ಮೀನ
ನಿಮ್ಮ ಸಿಡುಕುತನ ಸಂಬಂಧ ಹಾಳು ಮಾಡೀತು. ಕೆಲವರು ನಿಮ್ಮ ಒಳ್ಳೆತನ ದುರುಪಯೋಗ ಮಾಡುವರು. ಖರೀದಿ ಉತ್ಸಾಹ, ಧನವ್ಯಯ.



