October 17, 2026
Saturday, October 17, 2026
spot_img

ನನ್ನ ಸೂಪರ್‌ಸ್ಟಾರ್‌ಗೆ ಜನ್ಮದಿನದ ಸಂಭ್ರಮ : ಚಿರಂಜೀವಿ ಸರ್ಜಾ ಬರ್ಥ್‌ಡೇಗೆ ಮೇಘನಾ ಸ್ಪೆಷಲ್‌ ಪೋಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದು ಸ್ಯಾಂಡಲ್‌ವುಡ್‌ ನಟ ದಿ. ಚಿರಂಜೀವ ಸರ್ಜಾ ಅವರ ಜನ್ಮದಿನವಾಗಿದ್ದು, ಪತ್ನಿ ಮೇಘನಾ ರಾಜ್‌ ಭಾವನಾತ್ಮಕ ಪೋಸ್ಟ್‌ ಒಂದನ್ನು ಮಾಡಿದ್ದಾರೆ.

ತಮ್ಮ ಡೇಟಿಂಗ್‌ ದಿನಗಳ ಫೋಟೊವೊಂದನ್ನು ಅಪ್‌ಲೋಡ್‌ ಮಾಡಿ, ಬರ್ಥ್‌ಡೇ ಬಾಯ್‌, ನೀನು ಯಾವಾಗಲೂ ನನ್ನ ಸೂಪರ್‌ಸ್ಟಾರ್‌ ಎಂದು ಬರೆದುಕೊಂಡಿದ್ದಾರೆ. ಬಹಳ ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಎಲ್ಲರ ಒಪ್ಪಿಗೆಯೊಂದಿಗೆ ಹಸಮಣೆ ಏರಿತ್ತು.

https://www.instagram.com/p/DekSbYuy8zw/?utm_source=ig_embed&ig_rid=AjjdVFx_Hanhg1pRYdM-dzS

ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿಯನ್ನು ನೋಡಿದರೆ ಎಂತವರಿಗೂ ಹೊಟ್ಟೆಕಿಚ್ಚು ಆಗುವಂತಿತ್ತು. ಮೇಘನಾ ರಾಜ್‌ ಗರ್ಭಿಣಿಯಾಗಿದ್ದಾಗ ಅನಿರೀಕ್ಷಿತ ದುರಂತದಿಂದ ಚಿರು ಮೃತಪಟ್ಟಿದ್ದರು. ಮೇಘನಾ ರಾಜ್‌ ಜೀವನ ನೆನೆದು ಅಭಿಮಾನಿಗಳು ಕಣ್ಣೀರಿಟ್ಟಿದ್ದರು.

ಇದಾಗಿ ಆರು ವರ್ಷಗಳು ಕಳೆದಿದ್ದು, ಮೇಘನಾ ಮಾತ್ರ ಮರುಮದುವೆಯ ಬಗ್ಗೆ ಆಲೋಚಿಸಿಲ್ಲ. ಮಗನಿಗೆ ತಂದೆಯ ಫೋಟೊ ತೋರಿಸಿ ಮಾತನಾಡಿಸುವ ಮೇಘನಾ ಇಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪತಿಯ ಫೋಟೊ ಅಪ್‌ಲೋಡ್‌ ಮಾಡಿದ್ದಾರೆ. ಇಂದು ಅಪ್ಪನ ಜನ್ಮದಿನ ಎಂದು ಮಗನಿಗೆ ಹೇಳಿಕೊಟ್ಟಿದ್ದಾರೆ. ಚಿರು ಬಗ್ಗೆ ಮಾಡಿರುವ ಪೋಸ್ಟ್‌ಗೆ 62ಸಾವಿರ ಲೈಕ್ಸ್‌ ಬಂದಿದ್ದು, ಮಿಸ್‌ ಯು ಚಿರು ಸರ್‌, ನಿಮ್ಮಿಬ್ಬರ ಪ್ರೀತಿ ಅಮರ ಎಂದು ಫ್ಯಾನ್ಸ್‌ ಕಮೆಂಟ್‌ ಮಾಡ್ತಿದ್ದಾರೆ.

Must Read