October 17, 2026
Saturday, October 17, 2026
spot_img

ಕನ್ನಡ ನಾಡಿನ ಜೀವನದಿ ʼಕಾವೇರಿ ತೀರ್ಥೋದ್ಭವʼಕ್ಕೆ ಕ್ಷಣಗಣನೆ : ತಲಕಾವೇರಿಯಲ್ಲಿ ಭಕ್ತರ ದಂಡು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ನಾಡಿನ ಜೀವನದಿ ಎಂದೇ ಪ್ರಸಿದ್ಧಿ ಪಡೆದಿರುವ ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ತಲಕಾವೇರಿಯಲ್ಲಿ ಭಕ್ತರ ದಂಡು ಆಗಮಿಸಿದೆ.

ಕೊಡಗಿನ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿರುವ ತಲಕಾವೇರಿಯಲ್ಲಿ ಇಂದು ಸಂಜೆ 7 ಗಂಟೆ 50 ನಿಮಿಷಕ್ಕೆ ಮೇಷ ಲಗ್ನದಲ್ಲಿ ಪವಿತ್ರ ತೀರ್ಥೋದ್ಭವ ಜರುಗಲಿದೆ. ಈಗಾಗಲೇ ಭಕ್ತಾದಿಗಳು ಆಗಮಿಸಿ, ಪವಿತ್ರ ತೀರ್ಥೋದ್ಭವವನ್ನು ಕಣ್ತುಂಬಿಕೊಳ್ಳಲು ಕಾತರರಾಗಿ ಕಾಯುತ್ತಿದ್ದಾರೆ.

ತಲಕಾವೇರಿಯ ಬ್ರಹ್ಮಕುಂಡಿಕೆ, ಅಗಸ್ತ್ಯೇಶ್ವರ ದೇವಾಲಯ ಹಾಗೂ ಭಾಗಮಂಡಲದ ದೇವಾಲಯಗಳು ವಿದ್ಯುತ್ ದೀಪಗಳು ಮತ್ತು ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿವೆ. ಪವಿತ್ರ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಇಡೀ ಕ್ಷೇತ್ರದಲ್ಲಿ ಭಕ್ತಿಭಾವದ ವಾತಾವರಣ ಮನೆಮಾಡಿದೆ. ತೀರ್ಥೋದ್ಭವದ ಬಳಿಕ ಭಕ್ತರಿಗೆ ತೀರ್ಥ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತರ ನಡುವೆ ನೂಕುನುಗ್ಗಲು ಉಂಟಾಗದಂತೆ ಕಾವೇರಿ ಕುಂಡಿಕೆಯ ಸುತ್ತಮುತ್ತ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ರಾತ್ರಿ ವೇಳೆಯಲ್ಲಿಯೂ ಭಕ್ತರಿಗೆ ಅನುಕೂಲವಾಗುವಂತೆ ಹೈಮಾಸ್ಟ್ ದೀಪಗಳು ಹಾಗೂ ಬೃಹತ್ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ.

Must Read