October 17, 2026
Saturday, October 17, 2026
spot_img

ದಾಖಲೆಯ ಟ್ರಾಫಿಕ್‌ ಜಾಮ್‌ಗೆ ಸಾಕ್ಷಿಯಾದ ರಾಜಧಾನಿ ಬೆಂಗಳೂರು : ರಸ್ತೆಯಲ್ಲೇ ಆರು ಗಂಟೆ ಕಳೆದ ಜನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರು ಟ್ರಾಫಿಕ್‌ ಸಿಟಿಯಾಗಿ ಬದಲಾಗುತ್ತಿದೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಜನರು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದು, ನಿನ್ನೆ ರಾತ್ರಿ ದಾಖಲೆಯ ಟ್ರಾಫಿಕ್‌ ಜಾಮ್‌ ಉಂಟಾಗಿದೆ.

ನಗರದ ಪ್ರಮುಖ ರಸ್ತೆಗಳಲ್ಲಿ, ಬೆಂಗಳೂರು ತೊರೆಯುವ ಮಾರ್ಗಗಳಲ್ಲಿ ಬರೋಬ್ಬರು ಆರು ಗಂಟೆ ಟ್ರಾಫಿಕ್‌ ಜಾಮ್‌ ಆಗಿದ್ದು, ಅನ್ನ ನೀರು ಬಾತ್‌ರೂಮ್‌ ಇಲ್ಲದೇ ಜನ ಕಾರು, ಬಸ್‌ಗಳಲ್ಲಿ ಸ್ಟ್ರಕ್‌ ಆಗಿದ್ದಾರೆ. ಮೈಸೂರು ರೋಡ್‌, ತುಮಕೂರು ರೋಡ್‌ ಹಾಗೂ ಏರ್‌ಪೋರ್ಟ್‌ನಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿದ್ದು, ಜನ ಹೈರಾಣಾಗಿದ್ದಾರೆ.

ದಸರಾಗೆಂದು ಊರಿಗೆ ತೆರಳುವ ಜನರು ಬಸ್‌, ಕಾರುಗಳಲ್ಲಿ ಟ್ರಾವೆಲ್‌ ಮಾಡುತ್ತಿದ್ದು, ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿ ಸುಸ್ತಾಗಿದ್ದಾರೆ. ಬೆಳಗಿನ ಜಾವಕ್ಕೆ ಊರುಗಳಿಗೆ ರೀಚ್‌ ಆಗಬೇಕಿದ್ದ ಬಸ್‌ ಬೆಳಗಿನ ಜಾವಕ್ಕೆ ಬೆಂಗಳೂರು ಸಿಟಿಯಿಂದ ಹೊರಕ್ಕೆ ಬಂದಿದೆ. ಇದರ ಜೊತೆಗೆ ಮಳೆ ಬಂದು, ರಸ್ತೆಗಳೆಲ್ಲ ಹಳ್ಳಗಳಾಗಿ ಬದಲಾಗಿದೆ.

ಟ್ರಾಫಿಕ್ ಜಾಮ್‌ನಿಂದ ಕಂಗೆಟ್ಟ ಸಾರ್ವಜನಿಕರು, ಸಂಚಾರ ಸುಗಮಗೊಳಿಸುವಂತೆ ಸ್ಥಳೀಯ ಸಂಚಾರಿ ಪೊಲೀಸ್ ಠಾಣೆಗಳಿಗೆ ಕರೆ ಮಾಡಿ ಮನವಿ ಮಾಡಿದರು. ದಸರಾ ರಜೆ ಹಿನ್ನೆಲೆ ಊರಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿದ್ದರೂ, ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಸೂಕ್ತ ವ್ಯವಸ್ಥೆ ಇಲ್ಲದಿರುವ ಬಗ್ಗೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು.

Must Read