October 17, 2026
Saturday, October 17, 2026
spot_img

ದಾಂಡೇಲಿಯಲ್ಲಿ ಭೀಕರ ರಸ್ತೆ ಅಪಘಾತ: ಓರ್ವ ಸಾ*ವು, 5 ಮಂದಿಗೆ ಗಾಯ

ಹೊಸದಿಗಂತ ವರದಿ ದಾಂಡೇಲಿ:

ತಾಲೂಕಿನ ಕೆರವಾಡ ಗ್ರಾಮದ ಶ್ರೇಯಸ್ ಪೇಪರ್ ಮಿಲ್ ಹತ್ತಿರ ದಾಂಡೇಲಿ-ಹಳಿಯಾಳ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ರಾತ್ರಿ ಭೀಕರ ಅಪಘಾತ ಸಂಭವಿಸಿ, ಓರ್ವ ಸಾವನ್ನಪ್ಪಿ, ಐದು ಮಂದಿಗೆ ಗಾಯವಾದ ಘಟನೆ ನಡೆದಿದೆ.

ಹುಬ್ಬಳ್ಳಿಯ ಗೋಪನಕೊಪ್ಪದ ಸ್ವಾಗತ ಕಾಲೋನಿ ನಿವಾಸಿ ಮೌಲಾಲಿ ತಂದೆ ಹಜರೇಸಾಬ ತೆಗ್ಗಿನಮನೆ (23) ತನ್ನ ಕಾರು ಸಂಖ್ಯೆ ಕೆಎ-63/1272 ನಲ್ಲಿ ದಾಂಡೇಲಿ ಕಡೆಯಿಂದ ಹಳಿಯಾಳ ಕಡೆಗೆ ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದು, ಎದುರಿನಿಂದ ಬರುತ್ತಿದ್ದ ಮೋಟಾರ್ ಸೈಕಲ್ ಸಂಖ್ಯೆ ಕೆಎ-23/ಕೆ-7111 ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ.

ಡಿಕ್ಕಿ ಹೊಡೆದರೂ ನಿಲ್ಲಿಸದೆ ಸುಮಾರು 1 ಕಿ.ಮೀ ವರೆಗೆ ಮೋಟಾರ್ ಸೈಕಲ್ ಸಮೇತ ಕಾರನ್ನು ಎಳೆದೊಯ್ದು, ನಂತರ ರಸ್ತೆಯ ಪಕ್ಕದ ಅರಣ್ಯ ಪ್ರದೇಶದ ನೀರಿನ ಚೇಂಬರಿಗೆ ಡಿಕ್ಕಿ ಹೊಡೆದು ಕಾರು ಪಲ್ಟಿಯಾಗಿದೆ.

ಈ ಅಪಘಾತದಲ್ಲಿ ಕಾರು ಚಾಲಕ ಮೌಲಾಲಿ ತೆಗ್ಗಿನಮನೆ ಸ್ಥಳದಲ್ಲೇ ಮೃತಪಟ್ಟಿದ್ದು, ಕಾರಿನಲ್ಲಿದ್ದ ಹಸನ ಶರೀಫನವರ (23), ಅಬ್ದುಲ್ ಆಬಿದ್ ಇಮಾಮಸಾಬ ಸವಣೂರ (24), ವಾಹಿದ್ ಮುಕ್ತುಂಸಾಬ ಮುಲ್ಲಾ (15) ಮತ್ತು ಬೈಕ್ ಸವಾರರಾದ ಪಿತಾಂಬರ ಈಶ್ವರ ಮೆಂಡಿಲೆಕರ (40), ಓಂಕಾರ ಪಿತಾಂಬರ ಮೆಂಡಿಲೆಕರ (17) ಇವರುಗಳಿಗೆ ಗಂಭೀರ ಗಾಯಗಳಾಗಿವೆ.

ಈ ಬಗ್ಗೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಶಿವಾನಂದ‌ ಅಂಬಿಗೇರ ಅವರ ಮಾರ್ಗದರ್ಶನದಲ್ಲಿ ಶಿವಾನಂದ ನಾವದಗಿ ತನಿಖೆ ಕೈಗೊಂಡಿದ್ದಾರೆ.

Must Read