October 17, 2026
Saturday, October 17, 2026
spot_img

ಬಿಡದಿ ಟೌನ್‌ಶಿಪ್‌ ಯೋಜನಾ ಪ್ರದೇಶಕ್ಕೆ ತಜ್ಞರ ಸಮಿತಿ ಭೇಟಿ; ಗ್ರಾಮಗಳ ವಸ್ತುಸ್ಥಿತಿ ಪರಿಶೀಲನೆ

ಹೊಸದಿಗಂತ ವರದಿ ರಾಮನಗರ:

ಬಿಡದಿ ಟೌನ್‌ಶಿಪ್‌ ಯೋಜನೆಗೆ ಸಂಬಂಧಿಸಿದಂತೆ ವಸ್ತುಸ್ಥಿತಿ ಅರಿತು ವರದಿ ಸಲ್ಲಿಸಲು ಸರ್ಕಾರ ನೇಮಿಸಿರುವ ಸಮಿತಿಯ ಸದಸ್ಯರು ಯೋಜನಾ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಿವೃತ್ತ ನ್ಯಾಯಾಧೀಶ ಗುರುನಾಥನ್ ನರೇಂದ್ರನ್ ಅವರ ನೇತೃತ್ವದ ಸಮಿತಿಯ ಸದಸ್ಯರು ಬನ್ನಿಗಿರಿ, ಬೈರಮಂಗಲ, ಹೊಸೂರು ಗ್ರಾಮಗಳಿಗೆ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ಬೈರಮಂಗಲದ ಪ್ರಾಥಮಿಕ ಆರೋಗ್ಯ ಕೇಂದ್ರ, ಹಾಲಿನ ಡೈರಿ ಹಾಗೂ ಕೆರೆಗಳನ್ನ ವೀಕ್ಷಣೆ ಮಾಡಿದರು. ಆಸ್ಪತ್ರೆಯ ಕೊಠಡಿಗಳು, ಶೌಚಾಲಯಗಳ ವೀಕ್ಷಣೆ ಮಾಡಿದರು.  ಆಸ್ಪತ್ರೆಗೆ ಪ್ರತಿದಿನ ಎಷ್ಟು ರೋಗಿಗಳು ಬರುತ್ತಾರೆ, ಔಷದಿಗಳು‌ ಇದಿಯಾ ಎಂದು ಮಾಹಿತಿ ಕೇಳಿ ಪಡೆದುಕೊಂಡರು. ಹಾಲು ಉತ್ಪಾದಕ ಸಹಕಾರ ಸಂಘಕ್ಕೆ ಭೇಟಿ ನೀಡಿ ಸಂಘಕ್ಕೆ ಪ್ರತಿದಿನ ಎಷ್ಟು ಲೀಟರ್ ಹಾಲು ಬರುತ್ತದೆ ಎಷ್ಟು ರಾಸುಗಳಿವೆ ಎಂದು ಮಾಹಿತಿ ಪಡೆದರು.

ಬನ್ನಿಗಿರಿ ಗ್ರಾಮದ ತೂಬಿನಕೆರೆ ಹಾಗೂ ಹೊಸೂರು ಗ್ರಾಮದ ಕೆರೆಯನ್ನ ವೀಕ್ಷಣೆ ಮಾಡಿದರು. ತೂಬಿನಕೆರೆಯ ನೈರ್ಮಲ್ಯ ಕಂಡು ಬೇಸರ ವ್ಯಕ್ತಪಡಿಸಿಸರು. ಬೈರಮಂಗಲ ಗ್ರಾ.ಪಂ ಪಿಡಿಒ ಅವರನ್ನ ಕರೆದು ಜಲ ಮೂಲವಾದ ಕೆರೆಯಲ್ಲಿ ಸ್ವಚ್ಛತೆ ಕಾಪಾಡಿ‌ ಎಂದು ಸಲಹೆ ನೀಡಿದರು.

ಇದನ್ನೂ ಓದಿ:

 ಸಮಿತಿಯ ಸದಸ್ಯರು ರೈತರ ಜಮೀನುಗಳಿಗೆ ಭೇಟಿ ನೀಡದೆ ಕೇವಲ ಆಸ್ಪತ್ರೆ, ಡೈರಿ, ಕೆರೆಗಳನ್ನಷ್ಟೆ ವೀಕ್ಷಣೆ ಮಾಡಿ ರೈತರ ಮನವಿ ಸ್ವೀಕರಿಸದೆ ತೆರಳಿದ್ದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸಮಿತಿ ಸದಸ್ಯರಾದ ಎಸ್.ರಂಗನಾಥ್, ಪ್ರಸನ್ನ ಕುಮಾರ್, ಜಿಬಿಡಿಎ ಇಲಾಖೆಯ ಪ್ರದೀಪ್, ಬಿಇಒ ಸೋಮಲಿಂಗಯ್ಯ, ಪಿಡಿಒ ಉಮೇಶ್, ರೈತ ಮುಖಂಡರಾದ ಪ್ರಕಾಶ್, ನಾಗರಾಜು, ಅಶ್ವಥ್ ಇದ್ದರು.

Must Read