October 18, 2026
Sunday, October 18, 2026
spot_img

ಶಿವಮೊಗ್ಗ: ಮನೆಯಲ್ಲೇ ನೇಣು ಬಿಗಿದುಕೊಂಡು ಯುವ ಇಂಜಿನಿಯರ್ ಆತ್ಮಹ*ತ್ಯೆ

ಹೊಸದಿಗಂತ ವರದಿ ಶಿವಮೊಗ್ಗ:

ಅವಿವಾಹಿತ ಇಂಜಿನಿಯರ್ ನೇಣು ಬಿಗಿದುಕೊಂಡು ಮನೆಯಲ್ಲಿ ಮೃತಪಟ್ಟ ಘಟನೆ  ಭಾನುವಾರ ಮಧ್ಯಾಹ್ನ ಶಿಕಾರಿಪುರ ಪಟ್ಟಣದ ಚನ್ನಕೇಶವ ನಗರದಲ್ಲಿ ನಡೆದಿದೆ.    

ಮೃತನನ್ನು ಅನ್ವಿತ್ ಸಾಗರ್ (27) ಎಂದು ಗುರುತಿಸಲಾಗಿದ್ದು, ಪಟ್ಟಣದ ಪ್ರತಿಷ್ಠಿತ ಶಿವ ಸಹಕಾರಿ ಬ್ಯಾಂಕಿನ ನಿರ್ದೇಶಕ ಎಲ್. ಗಣಪತಿರವರ ಪುತ್ರನಾಗಿದ್ದಾನೆ. ಶನಿವಾರ ಪೋಷಕರ ಜೊತೆ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ವಾಪಸ್ ಆಗಿದ್ದ ಅನ್ವಿತ್ ಭಾನುವಾರ ಮಧ್ಯಾಹ್ನ ಏಕಾಏಕಿ ಪಟ್ಟಣದ ಚನ್ನಕೇಶವ ನಗರದಲ್ಲಿರುವ ಸ್ವಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.   

 ಮೃತ ಅನ್ವಿತ್ ತಂದೆ-ತಾಯಿ, ಸಹೋದರನ ಸಹಿತ ಬಂಧು ಬಳಗ ಆಗಲಿದ್ದಾನೆ. ಸಂಜೆ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ರಾತ್ರಿ ಪಟ್ಟಣದ ಹೊನ್ನಾಳಿ ರಸ್ತೆಯ ವೀರಶೈವ ಹಿಂದು ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.    

 ಅಂತಿಮ ದರ್ಶನಕ್ಕೆ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜ್ ಗೌಡ, ತಾಲೂಕು ಸಾಧು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ನವಿಲೇಶಪ್ಪ ಕಾರ್ಯದರ್ಶಿ ವೀರೇಂದ್ರ ಪಾಟೀಲ್, ಶಿವ ಸಹಕಾರಿ ಬ್ಯಾಂಕ್ ಅಧ್ಯಕ್ಷ ಮಹದೇವ ಪಾಟೀಲ್, ಪ್ರಬಂಧಕ ಅರವಿಂದ್ ಕುಮಾರ್ ಗಂಗೊಳ್ಳಿ ಮುಖಂಡ ಬಸವರಾಜಪ್ಪ ಗಬ್ಬೂರು, ಜಗದೀಶ ಈಸೂರು  ಮತ್ತಿತರರು ಅಂತಿಮ ದರ್ಶನ ಪಡೆದರು.

Must Read