ಹೊಸದಿಗಂತ ವರದಿ ಮುಂಡಗೋಡ:
ಅಪ್ರಾಪ್ತ ವಯಸ್ಕ ಬಾಲಕಿಯನ್ನು ಪುಸಲಾಯಿಸಿ ಮೂರು ದಿನಗಳ ಕಾಲ ವಿವಿಧೆಡೆ ಕರೆದೊಯ್ದು, ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ ಆರೋಪದಡಿ ಯುವಕನ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲೂಕಿನ ಮಜ್ಜಿಗೇರಿ ಗ್ರಾಮದ ಭರತೇಶ ನೂಲ್ವಿ (25) ಎಂಬಾತನ ವಿರುದ್ಧ ಬಾಲಕಿಯ ಪಾಲಕರು ದೂರು ನೀಡಿದ್ದಾರೆ. ಆರೋಪಿಯು ಕಳೆದ ಒಂದು ವರ್ಷದಿಂದ ಬಾಲಕಿಯ ಹಿಂದೆ ಬಿದ್ದು, ಪ್ರೀತಿಸುವುದಾಗಿ ನಂಬಿಸಿ ಅ.8ರಂದು ಆಕೆಯನ್ನು ಕರೆದೊಯ್ದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ:
ಬಾಲಕಿಯನ್ನು ಬೈಕ್ನಲ್ಲಿ ಟಿಬೆಟಿಯನ್ ಕ್ಯಾಂಪ್, ಶಿಗ್ಗಾವಿಯ ರಾಕ್ ಗಾರ್ಡನ್, ಬಾಚಣಕಿ ಹಾಗೂ ಸನವಳ್ಳಿ ಡ್ಯಾಂ ಸೇರಿದಂತೆ ವಿವಿಧೆಡೆ ಕರೆದೊಯ್ದಿದ್ದಾನೆ. ಈ ವೇಳೆ ಆಕೆಯ ಇಚ್ಛೆಗೆ ವಿರುದ್ಧವಾಗಿ ಅಸಭ್ಯವಾಗಿ ವರ್ತಿಸಿ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅ.12ರಂದು ಘಟನೆ ಕುರಿತು ಬಾಲಕಿಯ ಪಾಲಕರಿಗೆ ಮಾಹಿತಿ ತಿಳಿದುಬಂದಿದ್ದು, ಅವರು ಆರೋಪಿಯ ಮನೆಗೆ ತೆರಳಿ ವಿಚಾರಿಸಿದ್ದಾರೆ. ಬಳಿಕ ಬಾಲಕಿಯ ಪಾಲಕರು ಮುಂಡಗೋಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.



