ಹೊಸದಿಗಂತ ವರದಿ ಹುಬ್ಬಳ್ಳಿ:
ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ, ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿ ಮತ್ತು ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರ ನಡುವೆ ನಡೆದ ಮಾತುಕಥೆ ಅತ್ಯಂತ ಸಮಾಧಾನಕರವಾಗಿ ನಡೆದಿರುವುದು ಅಭಿನಂದನಾರ್ಹ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಸಭೆಯ ಮುಖಾಂತರ ರೈತರು ತಮ್ಮ ಬೇಡಿಕೆಗಳನ್ನು ಶಾಂತಿಪೂರ್ವಕವಾಗಿ ಮತ್ತು ಕಾನೂನುಬದ್ಧವಾಗಿ ಒತ್ತಾಯಿಸುವವರು ಅನ್ನುವುದು ಸಾಬೀತಾಗಿದೆ. ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿರುವಂತಹ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೂ ಕೂಡ ಅಭಿನಂದನೆ. ಮತ್ತು ಅಲ್ಲಿ ಹಾಜರಿದ್ದ ಇತರ ಎಲ್ಲಾ ನಮ್ಮ ಜನಪ್ರತಿನಿಧಿ ನಾಯಕರಿಗೆ ಅಭಿನಂದನೆ. ಮತ್ತೊಮ್ಮೆ ರೈತ ಸಮುದಾಯಕ್ಕೆ, ರೈತ ನಾಯಕರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಬರುವಂತ ದಿನಗಳಲ್ಲಿ ಆದಷ್ಟು ಬೇಗನೆ ಅವರ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯಲಿ ಎಂದು ನಾನು ಈ ದಸರಾ ಹಬ್ಬದ ಸಂದರ್ಭದಲ್ಲಿ ಜಗನ್ಮಾತೆಗೆ ಪ್ರಾರ್ಥನೆಯನ್ನು ಮಾಡುತ್ತೇನೆ ಎಂದು ತಿಳಿಸಿದ್ದಾರೆ.



