ಹೊಸದಿಗಂತ ಡಿಜಿಟಲ್ ಡೆಸ್ಕ್:
ರೋಗಿಯನ್ನು ಹೊತ್ತು ಸಾಗುತ್ತಿದ್ದ ಏರ್ ಆಂಬುಲೆನ್ಸ್‌ವೊಂದನ್ನು ಬಾಂಗ್ಲಾದೇಶದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ಇದರಿಂದಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ವಿಟಿ-ಎಚ್ವೈಎ ನೋಂದಾಣಿತ ಬೀಚ್ಕ್ರಾಫ್ಟ್ ಕಿಂಗ್ ಏರ್ ಸಿ90ಎ ಏರ್ಕ್ರಾಫ್ಟ್ ಮಹಿಳಾ ರೋಗಿಯನ್ನು ಹೊತ್ತು ಅಗರ್ತಲಾದಿಂದ ಕೋಲ್ಕತ್ತಾಕ್ಕೆ ಹಾರಾಟ ನಡೆಸಿತ್ತು. 12,000 ಎತ್ತರದಲ್ಲಿ ವಿಮಾನ ಹಾರಾಟ ನಡೆಸುವಾಗ ತಾಂತ್ರಿಕ ಕಾರಣದಿಂದಾಗಿ ಆಕಾಶದಲ್ಲಿಯೇ ವಿಮಾನದ ಬಾಗಿಲು ತೆರೆದಿದೆ. ಇದರಿಂದಾಗಿ ಬಾಂಗ್ಲಾದಲ್ಲಿಯೇ ತುರ್ತು ಲ್ಯಾಂಡಿಗ್ ಮಾಡಲಾಗಿದೆ.
ಏರ್ಕ್ರಾಫ್ಟ್ ಮಧ್ಯಾಹ್ನ 1.40ರ ಸಮಾರಿಗೆ ಹಜರತ್ ಶಹಜಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಏರ್ಕ್ರಾಫ್ಟ್ನಲ್ಲಿ ಏಳು ಜನರಿದ್ದು, ಇದರಲ್ಲಿ ಇಬ್ಬರು ಪೈಲಟ್ಗಳು, ಓರ್ವ ರೋಗಿ, ವೈದ್ಯರು ಮತ್ತು ಪ್ಯಾರಾಮೆಡಿಕ್ ಮತ್ತು ಇಬ್ಬರು ಸಹಚರರಿದ್ದರು ಎಂದು ವರದಿಯಾಗಿದೆ.ರೋಗಿಯನ್ನು 56ವರ್ಷದ ಅಂಜನಾ ಬೌಮಿಕ್ ಎಂದು ಗುರುತಿಸಲಾಗಿದೆ. ಇವರನ್ನು ಕುರ್ಮಿತೊಲಾ ಮಲ್ಟಿಕೇರ್ ಸ್ಪೇಷಲೈಸ್ಡ್ ಆಸ್ಪತ್ರೆಗೆ ತಕ್ಷಣಕ್ಕೆ ಸಾಗಿಸಲಾಗಿತ್ತು. ಈ ವೇಳೆ ರೋಗಿ ಸಾವನ್ನಪ್ಪಿದ್ದಾರೆ. ಉಳಿದೆಲ್ಲಾ ಏರ್ಕ್ರಾಫ್ಟ್ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.
ಆರೋಗ್ಯ ಸಮಸ್ಯೆಗಳಿಂದಲೋ ಅಥವಾ ವಿಮಾನದ ತುರ್ತು ಲ್ಯಾಂಡಿಗ್‌ನಿಂದ ರೋಗಿ ಮೃತಪಟ್ಟಿದ್ದಾರೆಯೇ ಎನ್ನುವ ಬಗ್ಗೆ ಸದ್ಯ ಮಾಹಿತಿ ಲಭ್ಯವಾಗಿಲ್ಲ.



