ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೆ ಕೊಲೆ ಬೆದರಿಕೆ ಕರೆ ಬಂದಿದ್ದು, ಶಿವಮೊಗ್ಗ ಎಸ್‌ಪಿ ನಿಖಿಲ್ ಅವರಿಗೆ ದೂರು ನೀಡಿದ್ದಾರೆ.
ಎರಡು ದಿನಗಳ ಹಿಂದೆ ರಾತ್ರಿ ಒಂಬತ್ತರ ಸುಮಾರಿಗೆ ರಿಜ್ವಾನ್ ಬೇಗ್ ಎನ್ನುವ ವ್ಯಕ್ತಿಯಿಂದ ಕೊಲೆ ಬೆದರಿಕೆ ಕರೆ ಬಂದಿದೆ. ತದನಂತರ ಹನ್ನೊಂದು ಗಂಟೆಯಲ್ಲಿ ಫರಾನ್ ರಶೀದ್ ಎಂಬಾತ ಕರೆ ಮಾಡಿ ಕೆಟ್ಟ ಪದಗಳಲ್ಲಿ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.
ಕರೆಯಿಂದಾಗಿ ಮನೆಯಲ್ಲಿರುವ ಸದಸ್ಯರಿಗೂ ನನಗೂ ತೀವ್ರ ಆತಂಕವಾಗಿದೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಹಾಗೂ ಸೂಕ್ತ ಪೊಲೀಸ್ ಭದ್ರತೆ ಒದಗಿಸಿ ಎಂದು ಮನವಿ ಮಾಡಿದ್ದಾರೆ. ಮೊದಲ ಬಾರಿ ಕರೆ ಮಾಡಿದಾಗ ನಾನು ಜೋರಾಗಿಯೇ ಮಾತನಾಡಿದೆ. ನೀವು ಈಶ್ವರಪ್ಪನಾ ಎಂದು ಕೇಳಿದರು. ನಾನು ಹೌದು ಎಂದೆ. ನಾನು ಆಗ ಫಿಲಂ ಥಿಯೇಟರ್‌ನಲ್ಲಿದ್ದೆ. ಸರಿಯಾಗಿ ಕೇಳಿಸುತ್ತಿರಲಿಲ್ಲ. ಪೊಲೀಸ್ ಕಂಪ್ಲೆಂಟ್ ನೀಡುತ್ತೇನೆ ಎಂದು ಹೇಳಿದೆ. ಒಕೆ ಎಂದು ಹೇಳಿದ. ಎರಡನೇ ವ್ಯಕ್ತಿ ಜಮೀರ್ ಅಹ್ಮದ್ ಬಗ್ಗೆ ನಾನು ಮಾತನಾಡಿದ್ದನ್ನು ಉಲ್ಲೇಖಿಸಿದ್ದ. ಭಾರತದಿಂದಲೇ ಕರೆ ಬಂದಿದೆ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.



