ಸಾಮಾಗ್ರಿಗಳು
ಅಕ್ಕಿ
ಹೆಸರುಬೇಳೆ
ಕರಿಬೇವಿನ ಸೊಪ್ಪು
ಹಸಿಮೆಣಸಿನಕಾಯಿ
ಶುಂಠಿ
ಜೀರಿಗೆ
ಕಾಳುಮೆಣಸು
ಗೋಡಂಬಿ
ತುಪ್ಪ
ಉಪ್ಪು
ನೀರು
ಮಾಡುವ ವಿಧಾನ
ಕರಿಬೇವಿನ ಸೊಪ್ಪನ್ನು ತೊಳೆದು, ಹಸಿಮೆಣಸಿನಕಾಯಿ ಜೊತೆಗೆ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ನಂತರ ಕುಕ್ಕರ್ಗೆ ಎಣ್ಣೆ, ಸಾಸಿವೆ, ಜೀರಿಗೆ, ಹಿಂಗ್,ಕಾಳುಮೆಣಸು, ಕಾಯಿ, ಗೋಡಂಬಿ, ಕರಿಬೇವು ಹಾಕಿ ಬಾಡಿಸಿ
ನಂತರ ಪೇಸ್ಟ್ ಹಾಕಿ ಬಾಡಿಸಿ. ಆಮೇಲೆ ಬೇಳೆ, ಅಕ್ಕಿ, ಉಪ್ಪು, ಅರಿಶಿಣ ಹಾಕಿ ನೀರು ಹಾಕಿ ಸಣ್ಣ ಉರಿಯಲ್ಲಿ ಮೂರು ವಿಶಲ್ ಕೂಗಿಸಿದ್ರೆ ಪೊಂಗಲ್ ರೆಡಿ
ಈ ತಿಂಡಿಯಲ್ಲಿ ಹೆಚ್ಚು ಕೆಟ್ಟ ಫ್ಯಾಟ್ ಇಲ್ಲ. ಅಕ್ಕಿ ಕಾರ್ಬ್ಸ್ ಆದರೆ ಬೇಳೆ ಪ್ರೋಟೀನ್ ನೀಡುತ್ತದೆ. ವಿಟಮಿನ್ಗಾಗಿ ಕರಿಬೇವು ಹಾಗೂ ಈ ತಿಂಡಿಯಿಂದ ನಿಮ್ಮ ಹೊಟ್ಟೆ ಕ್ಲೀನ್ ಆಗಿರುತ್ತದೆ. ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.



