ಸಾಮಾಗ್ರಿಗಳು
ಆಲೂಗಡ್ಡೆ
ಕಾರ್ನ್ಫ್ಲೋರ್
ಅಕ್ಕಿ ಹಿಟ್ಟು
ಖಾರದಪುಡಿ
ಗರಂ ಮಸಾಲಾ
ಉಪ್ಪು
ಕೊತ್ತಂಬರಿ ಸೊಪ್ಪು
ಎಣ್ಣೆ
ಮಾಡುವ ವಿಧಾನ
ಮೊದಲು ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು ಇಟ್ಟುಕೊಳ್ಳಿ. ನಂತರ ಅದನ್ನು ಚೆನ್ನಾಗಿ ಸ್ಮಾಶ್ ಮಾಡಿ.
ನಂತರ ಇದಕ್ಕೆ ಉಪ್ಪು, ಖಾರದಪುಡಿ, ಗರಂ ಮಸಾಲಾ, ಕೊತ್ತಂಬರಿ ಸೊಪ್ಪು, ಕಾರ್ನ್ಫ್ಲೋರ್, ಅಕ್ಕಿ ಹಿಟ್ಟನ್ನು ಸೇರಿಸಿ ಮಿಕ್ಸ್ ಮಾಡಿ
ನಂತರ ಇದನ್ನು ನಿಮಗೆ ಬೇಕಾದ ಶೇಪ್ಗೆ ತಂದುಕೊಳ್ಳಿ. ಉಂಡೆಗಳನ್ನು ಮಾಡಿಕೊಳ್ಳಿ. ಆನಂತರ ಕಾದ ಎಣ್ಣೆಗೆ ಹಾಕಿ ಕ್ರಿಸ್ಪಿ ಆಗುವವರೆಗೂ ಕರಿದರೆ ಬೈಟ್ಸ್ ರೆಡಿ
ಇಲ್ಲವಾದಲ್ಲಿ ಪ್ಯಾನ್ ಮೇಲೆ ಬೇಯಿಸಬಹುದು ಅಥವಾ ಏರ್ ಫ್ರೈಯರ್ನಲ್ಲಿಯೂ ಮಾಡಬಹುದು.
ಕೆಚಪ್ ಹಾಗೂ ಒಂದು ಲೋಟ ಟೀ ಜೊತೆ ಕುಡಿದರೆ ಟೇಸ್ಟ್ ಅದ್ಭುತ



