October 20, 2026
Tuesday, October 20, 2026
spot_img

ವಿಧಾನಸೌಧವನ್ನು ಬ್ಲಾಸ್ಟ್‌ ಮಾಡಿದಂತೆ ಎಐ ವಿಡಿಯೋ ಮಾಡಿದ ಯುವಕ! ಕನ್ನಡಿಗರ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಹೃದಯದಂತಿರುವ ವಿಧಾನಸೌಧಕ್ಕೆ ಬಾಂಬ್‌ ಹಾಕಿ ಬ್ಲಾಸ್ಟ್‌ ಮಾಡಿದಂತಹ ವಿಡಿಯೋವೊಂದನ್ನು ಎಐ ಮೂಲಕ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವ್ಯಕ್ತಿ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

‘Jnx king Hg’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕಿಡಿಗೇಡಿಯೊಬ್ಬ ಈ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾನೆ. ವಿಧಾನಸೌಧದ ಮುಂಭಾಗ ಶೂಟ್ ಮಾಡಿ, ಅದನ್ನು ಬಾಂಬ್ ಬ್ಲಾಸ್ಟ್ ಮಾಡಿದಂತೆ ಅತ್ಯಂತ ನೈಜವಾಗಿ ಎಐ ತಂತ್ರಜ್ಞಾನ ಬಳಸಿ ಎಡಿಟ್ ಮಾಡಲಾಗಿದೆ. ಅಷ್ಟೇ ಅಲ್ಲದೆ, ವಿಧಾನಸೌಧವನ್ನು ಬಾಂಬ್‌ನಿಂದ ಉಡಾಯಿಸಿದ್ದೇನೆ ಎಂಬ ಶೀರ್ಷಿಕೆಯನ್ನೂ ಬರೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ತಾನೊಬ್ಬ ಭಯೋತ್ಪಾದಕ ಎಂಬಂತೆ ಬಿಂಬಿಸಿಕೊಳ್ಳಲು ಯತ್ನಿಸಿದ್ದಾನೆ.

https://www.instagram.com/reel/Des0NtSPRyx/?utm_source=ig_embed&ig_rid=A7mY-l2XZkCVmWZEiCmhbLa

ಗನ್‌ಗೆ ಬುಲೆಟ್‌ ಲೋಡ್‌ ಮಾಡುವ ರೀತಿ ಮಾಡಿ ನಂತರ ವಿಧಾನಸೌಧವನ್ನು ಬ್ಲಾಸ್ಟ್ ಮಾಡಿರುವಂತೆ ವಿಡಿಯೋ ಮಾಡಲಾಗಿದೆ. ಇದಕ್ಕೆ ಜನರು ತರಹೇವಾರಿ ಕಮೆಂಟ್‌ ಮಾಡಿದ್ದಾರೆ. ಈ ನನ್ನ ಮಗನನ್ನು ಒದ್ದು ಒಳಕ್ಕೆ ಹಾಕಿ, ಪೊಲೀಸರೇ ಗಮನಿಸಿ, ಇಂತವರನ್ನು ಸುಮ್ಮನೆ ಬಿಡಬೇಡಿ. ನಾರ್ತ್‌ ಇಂದ ಬಂದಿರಬಹುದು, ಈ ವಿಡಿಯೋದ ಪಾರ್ಟ್‌ ಎರಡನ್ನು ಜೈಲಿನಿಂದ ಮಾಡುವಂತೆ ಎನ್ನುವ ಕಮೆಂಟ್‌ಗಳು ಬಂದಿವೆ. ಎಲ್ಲರೂ ಬೆಂಗಳೂರು ಪೊಲೀಸರನ್ನು ಟ್ಯಾಗ್‌ ಮಾಡಿದ್ದು, ಶೀಘ್ರವೇ ಅವರು ಆಕ್ಷನ್‌ ತೆಗೆದುಕೊಳ್ಳುವ ಸಾಧ್ಯತೆ ಇದೆ.

Must Read