October 20, 2026
Tuesday, October 20, 2026
spot_img

ಈ ಬಾರಿಯ ದಸರಾ ಉತ್ಸವಕ್ಕೆ ಕುಟುಂಬಸಮೇತರಾಗಿ ಮೈಸೂರಿಗೆ ಬನ್ನಿ : ಸಿಎಂ ಡಿಕೆಶಿ ಆಹ್ವಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ವಿಜೃಂಭಣೆಯಿಂದ ನಾಡಹಬ್ಬ ದಸರಾ ಆಚರಣೆ ಆರಂಭವಾಗಿದೆ. ಮೈಸೂರು ದಸರಾ ಆಚರಣೆಯಲ್ಲಿ ನೀವೆಲ್ಲರೂ ಭಾಗಿಯಾಗಿ ಎಂದು ಸಿಎಂ ಡಿ.ಕೆ. ಶಿವಕುಮಾರ್‌ ಆಹ್ವಾನ ನೀಡಿದ್ದಾರೆ.

ನಾಡಹಬ್ಬಕ್ಕೆ ಸರ್ವರಿಗೂ ಆತ್ಮೀಯ ಆಹ್ವಾನ. ನಾಡಿನ ಕಲೆ ಸಂಸ್ಕೃತಿ, ಪರಂಪರೆ ಮತ್ತು ವೈಭವದ ಪ್ರತೀಕವಾದ ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ತಾಯಿ ಚಾಮುಂಡೇಶ್ವರಿಯ ಕೃಪಾಶೀರ್ವಾದದೊಂದಿಗೆ ಮೈಸೂರು ನಗರ ಸಿಂಗಾರಗೊಂಡಿದ್ದು, ನಾಡಿನ ಜನರನ್ನೆಲ್ಲ ತನ್ನತ್ತ ಕೈಬೀಸಿ ಕರೆಯುತ್ತಿದೆ.

ಈ ಬಾರಿಯ ದಸರಾ ಉತ್ಸವದಲ್ಲಿ ನೀವೂ ನಿಮ್ಮ ಕುಟುಂಬದವರೊಂದಿಗೆ ಪಾಲ್ಗೊಂಡು, ವೈಭವದ ಕ್ಷಣಗಳಿಗೆ ಸಾಕ್ಷಿಯಾಗಿ, ನಾಡಹಬ್ಬದ ಸಂಭ್ರಮವನ್ನು ಹಂಚಿಕೊಳ್ಳಿ.

ಮೈಸೂರಿಗೆ ಬನ್ನಿ. ದಸರಾ ವೈಭವವನ್ನು ಕಣ್ತುಂಬಿಕೊಳ್ಳಿ, ನಾಡಿನ ಸಂಸ್ಕೃತಿಯ ಸೊಬಗನ್ನು ಸಂಭ್ರಮಿಸೋಣ ಎಂದು ಟ್ವೀಟ್‌ ಮಾಡಿದ್ದಾರೆ. ಇದರ ಜೊತೆಗೆ ಮೈಸೂರಿನ ಅಲಂಕಾರದ ವಿಡಿಯೋವೊಂದನ್ನು ಪೋಸ್ಟ್‌ ಮಾಡಿದ್ದಾರೆ.

Must Read