ಹೊಸದಿಗಂತ ಡಿಜಿಟಲ್ ಡೆಸ್ಕ್:
ದಸರಾ ಉತ್ಸವದಲ್ಲಿ ಈ ಬಾರಿ ವಿಶೇಷ ಕೇಕ್‌ವೊಂದು ಎಲ್ಲರ ಗಮನ ಸೆಳೆದಿದೆ. ಕೆಲ ದಿನಗಳ ಹಿಂದೆ ತನ್ನ ಜೀವಕ್ಕೆ ಕುತ್ತು ಬಂದರೂ ಪ್ರಯಾಣಿಕರ ಪ್ರಾಣ ಉಳಿಸಿದ ಧೀರ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಶೌರ್ಯವನ್ನು ಗೌರವಿಸಲಾಗಿದೆ.
ಕೇಕ್‌ಗಳ ಪ್ರದರ್ಶನದ ವೇಳೆ ಮಹಿಳಾ ಶಿಕ್ಷಣ ಹಾಗೂ ಪ್ರಕೃತಿಯ ಥೀಮ್‌ಗಳ ಜೊತೆಗೆ ಪೈಲಟ್ ಅವರ ಸಾಹಸದ ಕಥೆಯನ್ನೂ ಬಿಂಬಿಸಲಾಗಿದೆ.
ಇನ್ಯಾವ ಕೇಕ್‌ಗಳಿದ್ದವು?
ಮೈಸೂರಿನ ಇತಿಹಾಸ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಕೇಕ್‌ಗಳೂ ಇದ್ದವು. ಕೃಷ್ಣರಾಜ ಒಡೆಯರ್ ಅವರ ಕಾಲದ ಜಗನ್ಮೋಹನ ಅರಮನೆಯ ವಿನ್ಯಾಸ ಹಾಗೂ ಮಹಿಳಾ ಶಿಕ್ಷಣಕ್ಕೆ ಬೆಂಬಲ ನೀಡಿದ ಮಹಾರಾಣಿ ಕೆಂಪನಂಜಮ್ಮಣಿ ಅವರ ಕೊಡುಗೆಯನ್ನು ಬಿಂಬಿಸುವ ಕೇಕ್‌ಗಳು ಪ್ರದರ್ಶನದಲ್ಲಿದ್ದವು. ಜೊತೆಗೆ ಪ್ರಾಣಿಗಳು, ಪಕ್ಷಿಗಳು ಹಾಗೂ ನೀರಿ ಕತೆಗಳ ಕುರಿತಾದ ಕೇಕ್‌ಗಳು ಜನರ ಮನಸ್ಸಿಗೆ ಹತ್ತಿರವಾದವು.



