October 21, 2026
Wednesday, October 21, 2026
spot_img

ಭಾರತ-ಕಿವೀಸ್ ರೋಚಕ ಕದನಕ್ಕೆ ವೇದಿಕೆ ಸಿದ್ಧ: ನಾಳೆಯಿಂದ ಹೈ-ವೋಲ್ಟೇಜ್ ಟಿ20 ಸರಣಿ ಶುರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಅತ್ಯಂತ ರೋಚಕವಾದ ಐದು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯು ನಾಳೆಯಿಂದ (ಅಕ್ಟೋಬರ್ 22) ಅಧಿಕೃತವಾಗಿ ಶುರುವಾಗಲಿದೆ. ಕಿವೀಸ್ ನೆಲದಲ್ಲಿ ಉಭಯ ತಂಡಗಳು ಮತ್ತೊಮ್ಮೆ ಮೈಕೊಡವಿ ನಿಂತು ಗೆಲುವಿಗಾಗಿ ಕಾದಾಡಲು ಸಜ್ಜಾಗಿವೆ. ವಿಶ್ವ ಕ್ರಿಕೆಟ್‌ನ ಬಲಿಷ್ಠ ತಂಡಗಳೆನಿಸಿರುವ ಇವೆರಡರ ನಡುವಿನ ಹೋರಾಟವು ಕ್ರೀಡಾಪ್ರೇಮಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಈ ಸರಣಿಯ ಮೊದಲೆರಡು ಪಂದ್ಯಗಳಿಗೆ ಕ್ರೈಸ್ಟ್​ಚರ್ಚ್‌ನ ಖ್ಯಾತ ಹ್ಯಾಗ್ಲಿ ಓವಲ್ ಮೈದಾನವು ಆತಿಥ್ಯ ವಹಿಸಲಿದೆ. ಇದರ ಬೆನ್ನಲ್ಲೇ ಮೂರು ಮತ್ತು ನಾಲ್ಕನೇ ಪಂದ್ಯಗಳು ಕ್ರಮವಾಗಿ ವೆಲ್ಲಿಂಗ್ಟನ್ ಹಾಗೂ ಆಕ್ಲೆಂಡ್‌ನ ಈಡನ್ ಪಾರ್ಕ್ ಮೈದಾನಗಳಲ್ಲಿ ಜರುಗಲಿವೆ. ಅಂತಿಮ ಹಾಗೂ ಐದನೇ ಮ್ಯಾಚ್ ಹ್ಯಾಮಿಲ್ಟನ್‌ನ ಪ್ರಸಿದ್ಧ ಸೆಡನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಸರಣಿಯ ವಿಜೇತರು ಯಾರಾಗಲಿದ್ದಾರೆ ಎಂಬುದು ಇಲ್ಲಿ ನಿರ್ಧಾರವಾಗಲಿದೆ.

ಈ ಎಲ್ಲಾ ಪಂದ್ಯಗಳು, ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 12:30 ಕ್ಕೆ ಸರಿಯಾಗಿ ಶುರುವಾಗಲಿವೆ. ಹೀಗಾಗಿ ಭಾರತದ ಅಭಿಮಾನಿಗಳು ರಾತ್ರಿವರೆಗೆ ಕಾಯದೆ, ಮಧ್ಯಾಹ್ನದ ಬಿಡುವಿನ ವೇಳೆಯಲ್ಲೇ ಕುಳಿತು ನೇರ ಪ್ರಸಾರವನ್ನು ಕಣ್ತುಂಬಿಕೊಳ್ಳಬಹುದು.

ಈ ರೋಚಕ ಸರಣಿಯ ಸಂಪೂರ್ಣ ನೇರಪ್ರಸಾರವನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ವೀಕ್ಷಿಸಬಹುದು. ಸೋನಿ ಸ್ಪೋರ್ಟ್ಸ್ ಟೆನ್ 1, ಟೆನ್ 1 ಎಚ್‌ಡಿ, ಟೆನ್ 5, ಟೆನ್ 5 ಎಚ್‌ಡಿ ಹಾಗೂ ಟೆನ್ 3, ಟೆನ್ 4 ಚಾನೆಲ್‌ಗಳಲ್ಲಿ ಲೈವ್ ಪ್ರಸಾರ ಸಿಗಲಿದೆ. ಟಿವಿ ಹೊರತುಪಡಿಸಿ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ವೀಕ್ಷಿಸಲು ಬಯಸುವವರು ‘ಸೋನಿ ಲಿವ್’ ಆ್ಯಪ್ ಅಥವಾ ಅಧಿಕೃತ ವೆಬ್‌ಸೈಟ್ ಮೂಲಕ ಲೈವ್ ಸ್ಟ್ರೀಮಿಂಗ್ ಆನಂದಿಸಬಹುದಾಗಿದೆ.

Must Read