ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಬ್ಬಗಳನ್ನು ಸಂಭ್ರಮಿಸೋಣ, ಅರ್ಥಪೂರ್ಣವಾಗಿ ಆಚರಿಸೋಣ. ಆದರೆ ಮಧ್ಯರಾತ್ರಿಯಲ್ಲಿ ದೊಡ್ಡ ಶಬ್ಧದ ಪಟಾಕಿಗಳನ್ನು ಹೊಡೆಯುವುದು. ಬೆಳಗಿನ ಜಾವದವರೆಗೂ ಲೌಡ್ ಸ್ಪೀಕರ್ ಹಾಕುವುದು ಸರಿಯಾ? ಎಂದು ನಟಿ ರಮ್ಯಾ ಗರಂ ಆಗಿದ್ದಾರೆ.
ಟ್ವಿಟರ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ತಡರಾತ್ರಿ ಮೂರು ಗಂಟೆಯಾಗಿದೆ. ಫನ್ ವರ್ಲ್ಡ್ ಆವರಣದಲ್ಲಿ ಪಟಾಕಿ ಸಿಡಿಯುತ್ತಲೇ ಇದೆ, ಲೌಡ್‌ಸ್ಪೀಕರ್‌ನಿಂದ ಕರ್ಕಷ ಸದ್ದು ಹೊರಹೊಮ್ಮುತ್ತಲೇ ಇದೆ. ಹಬ್ಬದ ಸಂಭ್ರಮದಲ್ಲಿ ಸ್ವಲ್ಪ ಹೊತ್ತು ಹೆಚ್ಚೇ ಪಟಾಕಿ ಹೊಡೆಯಬಹುದು. ಅದನ್ನೂ ಬಿಟ್ಟುಬಿಡೋಣ ಆದರೆ ಬೆಳಗಿನ ಜಾವ ಮೂರು ಗಂಟೆವರೆಗೂ ಸದ್ದು ಮಾಡಿದ್ರೆ ಜನ ಮಲಗೋದು ಹೇಗೆ?
ಕಂದಮ್ಮಗಳು, ವೃದ್ಧರಿಗೆ ಹಾರ್ಟ್ ಅಟ್ಯಾಕ್ ಆಗುವ ಸಾಧ್ಯತೆ ಇದೆ. ಈ ಕಾಮನ್ ಸೆನ್ಸ್ ಯಾಕೆ ಇರೋದಿಲ್ಲ? ಫನ್ ವರ್ಲ್ಡ್ ಸಮೀಪದಲ್ಲಿ ಆಸ್ಪತ್ರೆಗಳಿವೆ. ರೋಗಿಗಳ ಬಗ್ಗೆ ಕೊಂಚ ಕಾಳಜಿ ತೋರೋಕೂ ಕಷ್ಟವಾ? ಸುಪ್ರೀಂ ಕೋರ್ಟ್ ರಾತ್ರಿ ಹತ್ತು ಗಂಟೆಗೆ ಪಟಾಕಿ ಹೊಡೆಯುವುದನ್ನು ನಿಲ್ಲಿಸಬೇಕು. ಬೆಳಗ್ಗೆ ಆರು ಗಂಟೆಯಿಂದ ಪಟಾಕಿ ಹೊಡೆಯಬಹುದು ಎಂದು ಆದೇಶ ನೀಡಿದೆ. ಆದರೆ ಸುಪ್ರೀಂ ಆದೇಶವನ್ನು ಉಲ್ಲಂಘಿಸಿ ಪಟಾಕಿ ಹೊಡೆಯುವುದು ಯಾಕೆ? ಎಂದು ರಮ್ಯಾ ಗರಂ ಆಗಿದ್ದಾರೆ.



