ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾ ಬಿಡುಗಡೆಯಾದ ದಿನದಿಂದಲೂ ಬಾಕ್ಸ್ ಆಫೀಸ್ನಲ್ಲಿ ಹೊಸ ಇತಿಹಾಸ ಬರೆಯುತ್ತಿದೆ. ಸಿನಿಮಾ ಬಿಡುಗಡೆಯಾಗಿ ಕೇವಲ ಏಳು ದಿನಗಳಾಗಿದ್ದರೂ, ದೇಶಾದ್ಯಂತ ಅದ್ಭುತ ಕಲೆಕ್ಷನ್ ಮಾಡುವ ಮೂಲಕ ಧೂಳೆಬ್ಬಿಸುತ್ತಿದೆ. ರಜನಿಕಾಂತ್ ಅವರ ನಟನೆ ಹಾಗೂ ಮಾಸ್ ಡೈಲಾಗ್ಗಳು ಸಿನಿಪ್ರಿಯರನ್ನು ಮನಸೋಲುವಂತೆ ಮಾಡಿದೆ.
ಹಬ್ಬದ ರಜೆಗಳು ಮುಗಿದಿದ್ದರೂ ಸಹ ಸಿನಿಮಾದ ಮೇಲಿನ ಕ್ರೇಜ್ ಸ್ವಲ್ಪವೂ ಕಡಿಮೆ ಆಗಿಲ್ಲ. ವಿಶೇಷವಾಗಿ ಕೆಲವು ರಾಜ್ಯಗಳಲ್ಲಿ ದೊರೆತ ರಜೆಯ ಬಲದಿಂದ ಬುಧವಾರದಂದು ಚಿತ್ರವು ಬರೋಬ್ಬರಿ 31.50 ಕೋಟಿ ರೂ. ಗಳಿಕೆ ಕಂಡಿದೆ. ಇದರೊಂದಿಗೆ ಚಿತ್ರದ ಒಟ್ಟು 7 ದಿನಗಳ ಕಲೆಕ್ಷನ್ ಸುಮಾರು 355.50 ಕೋಟಿ ರೂ. ತಲುಪಿದೆ. ಮುಂಬರುವ ದಿನಗಳಲ್ಲಿ ಈ ಗಳಿಕೆಯು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ತಮಿಳುನಾಡು ಮಾತ್ರವಲ್ಲದೆ ಇತರ ದಕ್ಷಿಣ ರಾಜ್ಯಗಳಾದ ಕೇರಳ ಮತ್ತು ಕರ್ನಾಟಕದಲ್ಲೂ ಜೈಲರ್ 2 ಬಿರುಗಾಳಿ ಎಬ್ಬಿಸಿದೆ. ಕೇರಳದಲ್ಲಿ ಈ ಚಿತ್ರವು ಹಿಂದೆ ಬಂದಿದ್ದ ‘ಲಿಯೋ’ ಸಿನಿಮಾದ ದಾಖಲೆಯನ್ನು ಮುರಿದು, ಆಲ್-ಟೈಮ್ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂತೆಯೇ, ಕರ್ನಾಟಕದಲ್ಲೂ ಶೀಘ್ರದಲ್ಲೇ ಹಿಂದಿನ ‘ಜೈಲರ್’ ದಾಖಲೆಯನ್ನು ಮೀರಿ ನಿಲ್ಲಲಿದೆ.
ರಾಜ್ಯದಲ್ಲಿ ಚಿತ್ರವು ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಇಲ್ಲಿಯವರೆಗೆ ಅಂದಾಜು 132 ಕೋಟಿ ರೂ. ಗಳಿಸಿದೆ. ಮುಂದಿನ ದಿನಗಳಲ್ಲಿ ಇದು 200 ಕೋಟಿ ರೂ. ಗಡಿಯನ್ನು ದಾಟುವ ಸಾಧ್ಯತೆ ಇದೆ. ಒಟ್ಟಾರೆಯಾಗಿ, ಈ ವರ್ಷದ ಅತಿ ದೊಡ್ಡ ಬ್ಲಾಕ್ಬಸ್ಟರ್ ಚಿತ್ರವಾಗಿ ಜೈಲರ್ 2 ಹೊರಹೊಮ್ಮಿದೆ.



