ಹೊಸದಿಗಂತ ವರದಿ ಅಂಕೋಲಾ :
ಇಲ್ಲಿಯ ತಮ್ಮತೆಂಕಣಕೇರಿ ಪ್ರಾಥಮಿಕ ಶಾಲೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಎರಡು ಕೊಠಡಿಗಳು ಸಂಪೂರ್ಣ ಸುಟ್ಟು 50 ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿದೆ.
ಬುಧವಾರ ಮಧ್ಯರಾತ್ರಿ ಈ ದುರಂತ ಸಂಭವಿಸಿದ್ದು ವಿದ್ಯುತ್ ಶಾರ್ಟ್ ಸರ್ಕೂಟ್ ನಿಂದ ಈ ಅವಘಡ ಆಗಿದೆ.
ಮಧ್ಯರಾತ್ರಿ 1.30 ಕ್ಕೆ ಎದ್ದ ಬೆಂಕಿಯ ಕೆನ್ನಾಲಿಗೆಗೆ ಒಂದು ಕೊಠಡಿ ಸಂಪೂರ್ಣ ಸುಟ್ಟು ಕರಕಲಾಗಿದ್ದು ಇನ್ನೊಂದು ಕೊಠಡಿಗೆ ಭಾಗಶ: ಹಾನಿಯಾಗಿದೆ. ಕೊಠಡಿ ಒಳಗಿದ್ದ 5 ಲಕ್ಷ ರೂ. ಮೌಲ್ಯದ ಸ್ಮಾರ್ಟ ಟಿವಿ , ಆಟದ ಮತ್ತು ವ್ಯಾಯಾಮ ಸಲಕರಣಗಳು, ಬ್ಯಾಂಡ್ ಸೆಟ್, ಪುಸ್ತಕಗಳು, ಪಂಪ್ ಸೆಟ್ ಎಲ್ಲವೂ ಸಂಪೂರ್ಣ ಸುಟ್ಟು ಕರಕಲಾಗಿದೆ.
ಸಾರ್ವಜನಿಕರು ಮತ್ತು ಅಗ್ನಿಶಾಮಕ ದಳ ಹೋರಾಡಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಶಿಕ್ಷಣ ,ಕಂದಾಯ, ವಿದ್ಯುತ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.



