ಬೇಕಾಗುವ ಸಾಮಗ್ರಿಗಳು:
ತುರಿದ ಹಸಿ ತೆಂಗಿನಕಾಯಿ
ಹಾಲು
ಸಕ್ಕರೆ
ಏಲಕ್ಕಿ ಪುಡಿ
ಬಾದಾಮಿ, ಗೋಡಂಬಿ ಮತ್ತು ಪಿಸ್ತಾ
ಮಾಡುವ ವಿಧಾನ
ಮೊದಲು ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಸಣ್ಣ ಉರಿಯಲ್ಲಿ ಕುದಿಯಲು ಬಿಡಿ. ಹಾಲು ಗಟ್ಟಿಯಾಗುತ್ತಿದ್ದಂತೆ, ಅದಕ್ಕೆ ತುರಿದ ಹಸಿ ತೆಂಗಿನಕಾಯಿಯನ್ನು ಸೇರಿಸಿ ಚೆನ್ನಾಗಿ ಕಲಿಸಿ. ತೆಂಗಿನಕಾಯಿ ಹಾಲಿನಲ್ಲಿ ಬೆರೆತು ಮೆತ್ತಗಾಗುವವರೆಗೂ ಕುದಿಸಿ. ನಂತರ ನಿಮ್ಮ ರುಚಿಗೆ ತಕ್ಕಷ್ಟು ಸಕ್ಕರೆ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಸಾಲೆಯುಕ್ತ ಸುವಾಸನೆ ಬರುವವರೆಗೆ ತಿರುಗಿಸಿ. ಮಿಶ್ರಣವು ಕ್ರೀಮ್‌ನಂತೆ ಗಟ್ಟಿಯಾದಾಗ ಒಲೆಯಿಂದ ಇಳಿಸಿ. ಕೊನೆಯಲ್ಲಿ ಬಾದಾಮಿ, ಪಿಸ್ತಾ ಮತ್ತು ಗೋಡಂಬಿ ಚೂರುಗಳಿಂದ ಅಲಂಕರಿಸಿದರೆ ಬಿಸಿಬಿಸಿಯಾದ ‘ಕೊಕೊನಟ್ ರಬ್ಡಿ’ ಸಿದ್ಧ!



