October 23, 2026
Friday, October 23, 2026
spot_img

ಫಿಟ್ & ಫುಡ್ 22 | ಮಕ್ಕಳಿಗೆ ಸೊಪ್ಪು ತಿನ್ನಿಸುವುದು ಈಗ ಇನ್ನಷ್ಟು ಈಸಿ.. ಟ್ರೈ ಮಾಡಿ ಪಾಲಕ್ ಇಡ್ಲಿ ರೆಸಿಪಿ

ಏನೇನು ಬೇಕು?

ಇಡ್ಲಿ ಹಿಟ್ಟು

ಪಾಲಕ್ ಸೊಪ್ಪು

ಹಸಿಮೆಣಸಿನಕಾಯಿ

ಶುಂಠಿ-ಬೆಳ್ಳುಳ್ಳಿ ಪೇಸ್ಟ್

ಜೀರಿಗೆ

ಸಾಸಿವೆ, ಉದ್ದಿನಬೇಳೆ, ಎಣ್ಣೆ ಮತ್ತು ಎಳ್ಳು

ಮಾಡೋದು ಹೇಗೆ ನೋಡಿಕೊಳ್ಳಿ

ಮೊದಲು ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು, ಸ್ವಲ್ಪ ನೀರಿನಲ್ಲಿ 2 ನಿಮಿಷ ಬೇಯಿಸಿಕೊಳ್ಳಿ. ನಂತರ ಹಸಿಮೆಣಸಿನಕಾಯಿ, ಜೀರಿಗೆ ಮತ್ತು ಶುಂಠಿ-ಬೆಳ್ಳುಳ್ಳಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಪಾಲಕ್ ಪೇಸ್ಟ್ ಅನ್ನು ತಯಾರಿಸಿಟ್ಟುಕೊಂಡ ಇಡ್ಲಿ ಹಿಟ್ಟಿಗೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಇಡ್ಲಿ ಪಾತ್ರೆಗೆ ಎಣ್ಣೆ ಸವರಿ, ಹಿಟ್ಟನ್ನು ಹೊಯ್ದು 10 ರಿಂದ 12 ನಿಮಿಷಗಳ ಕಾಲ ಆವಿಯಲ್ಲಿ ಬೇಯಿಸಿದರೆ ಬಿಸಿಬಿಸಿ ಸಾಫ್ಟ್ ಪಾಲಕ್ ಇಡ್ಲಿ ಸಿದ್ಧ!

ಇದನ್ನ ತಿನ್ನೋದ್ರಿಂದ ಏನ್ ಲಾಭ?

ಪಾಲಕ್ ಸೊಪ್ಪಿನಲ್ಲಿ ಕಬ್ಬಿಣಾಂಶ, ವಿಟಮಿನ್ ‘ಎ’, ‘ಸಿ’ ಹಾಗೂ ಫೈಬರ್ ಅಧಿಕ ಪ್ರಮಾಣದಲ್ಲಿದೆ.

ಸಾಮಾನ್ಯವಾಗಿ ಮಕ್ಕಳು ಸೊಪ್ಪಿನ ಪಲ್ಯ ಅಥವಾ ಸಾರು ಎಂದರೆ ಮೂಗು ಮುರಿಯುತ್ತಾರೆ. ಹೀಗೆ ಇಡ್ಲಿಯಲ್ಲಿ ಪಾಲಕ್ ಬೆರೆಸಿ ಮಾಡಿಕೊಟ್ಟರೆ ಇಷ್ಟಪಟ್ಟು ತಿನ್ನುತ್ತಾರೆ.

ರಕ್ತಹೀನತೆ ತಡೆಯಲು ಮತ್ತು ಜೀರ್ಣಕ್ರಿಯೆ ಹೆಚ್ಚಿಸಲು ಈ ಇಡ್ಲಿ ಅತ್ಯುತ್ತಮ.

Must Read

Skip to toolbar