ಬೇಕಾಗುವ ಸಾಮಗ್ರಿಗಳು:
ಹಣ್ಣಾದ ಬಾಳೆಹಣ್ಣು
ಹಾಲು
ಸಕ್ಕರೆ
ಏಲಕ್ಕಿ ಪುಡಿ
ಒಣದ್ರಾಕ್ಷಿ ಮತ್ತು ಬಾದಾಮಿ
ತುಪ್ಪ
ಮಾಡುವ ವಿಧಾನ:
ಮೊದಲಿಗೆ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ, ಬಾದಾಮಿ ಮತ್ತು ಒಣದ್ರಾಕ್ಷಿಯನ್ನು ಹೊಂಬಣ್ಣಕ್ಕೆ ಬರುವವರೆಗೆ ಹುರಿದು ಪಕ್ಕಕ್ಕೆ ಎತ್ತಿಟ್ಟುಕೊಳ್ಳಿ. ನಂತರ ಅದೇ ಪಾತ್ರೆಗೆ ಹಾಲು ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಕಾಯಿಸಿ, ಹಾಲು ಕೊಂಚ ಗಟ್ಟಿಯಾಗಲು ಬಿಡಿ. ಹಣ್ಣಾದ ಬಾಳೆಹಣ್ಣನ್ನು ಚೆನ್ನಾಗಿ ಸ್ಮಾಶ್ ಮಾಡಿ ಪೇಸ್ಟ್ನಂತೆ ಮಾಡಿಕೊಳ್ಳಿ. ಹಾಲು ಚೆನ್ನಾಗಿ ಕುದಿಬಂದ ನಂತರ ಅದಕ್ಕೆ ಸಕ್ಕರೆ ಸೇರಿಸಿ ಕರಗಿಸಿ. ಗ್ಯಾಸ್ ಉರಿಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿ, ಬಾಳೆಹಣ್ಣಿನ ಮಿಶ್ರಣವನ್ನು ಹಾಲಿಗೆ ಸೇರಿಸಿ ಚೆನ್ನಾಗಿ ಕೈಯಾಡಿಸಿ. ಕೊನೆಯಲ್ಲಿ ಏಲಕ್ಕಿ ಪುಡಿ ಹಾಗೂ ಹುರಿದಿಟ್ಟುಕೊಂಡ ದ್ರಾಕ್ಷಿ-ಬಾದಾಮಿ ಸೇರಿಸಿದರೆ ಬಾಳೆಹಣ್ಣಿನ ಖೀರ್ ಸಿದ್ಧ!



