October 23, 2026
Friday, October 23, 2026
spot_img

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಭರ್ಜರಿ ಸ್ಪಂದನೆ: ಬಳ್ಳಾರಿಯಲ್ಲಿ ಶೇ.86.50 ಮತದಾನ

ಹೊಸದಿಗಂತ ವರದಿ ಬಳ್ಳಾರಿ:

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಜಿಲ್ಲೆಯಾದ್ಯoತ ಶುಕ್ರವಾರ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಶೇ. 86.50 ರಷ್ಟು ಮತದಾನವಾಗಿದೆ. ಬೆಳಿಗ್ಗೆ ಮತದಾನ ಚುರುಕುಗೋoಡಿತು. ಮಧ್ಯಾಹ್ನದ ವೇಳೆ ಮಂದಗತಿಯಲ್ಲಿ ನಡೆಯಿತು. ನಂತರ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಮುಕ್ತಾಯಗೊಂಡಿತು.

ಜಿಲ್ಲೆಯ ಎಲ್ಲ ಮತಗಟ್ಟೆ ಕೇಂದ್ರಗಳಲ್ಲಿ ಸಂಜೆ 4ರ ವೇಳೆಗೆ ಒಟ್ಟು ಶೇ.86.50 ರಷ್ಟು ದಾಖಲೆಯ ಮತದಾನವಾಗಿದೆ.

ಒಟ್ಟು 3,393 ನೋಂದಾಯಿತ ಮತದಾರರಿದ್ದು, ಪುರುಷರು-1,814 ಹಾಗೂ ಮಹಿಳೆಯರು-1,579 ಮತದಾರರಿದ್ದರು. ಚುನಾವಣೆಯಲ್ಲಿ ಒಟ್ಟು 2,935 ಮತದಾರರು ತಮ್ಮ ಹಕ್ಕನ್ನು ಚಲಾವಣೆಯಿಸಿದರು. ಅದರಲ್ಲಿ ಪುರುಷರು 1,615 (ಶೇ.89.08) ಹಾಗೂ ಮಹಿಳೆಯರು 1,320 (ಶೇ.83.54) ಉತ್ಸಾಹದಿಂದ ಮತದಾನ ಮಾಡಿದರು.

ಇದನ್ನೂ ಓದಿ:

ಬೆಳಗ್ಗೆಯಿಂದಲೇ ಮತಗಟ್ಟೆಗಳಿಗೆ ಶಿಕ್ಷಕ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಕಂಡುಬoತು. ಬೆಳಿಗ್ಗೆ 10ಕ್ಕೆ ಒಟ್ಟು 409 ಮತಗಳು (ಶೇ.12.05) ಚಲಾವಣೆಯಾಗಿದ್ದವು.
ಮಧ್ಯಾಹ್ನ 12 ನಂತರ ಮತದಾನದ ಪ್ರಮಾಣ ಏರಿಕೆಯಾಗಿ 1,453 ಮತಗಳು (ಶೇ.42.82) ದಾಖಲಾದವು.

ಮ. 2ಕ್ಕೆ ಮತದಾನ ಪ್ರಮಾಣ 2,333 ಮತಗಳೊಂದಿಗೆ ಶೇ.68.76 ಕ್ಕೆ ತಲುಪಿತು. ಸಂಜೆ 4ಕ್ಕೆ ಒಟ್ಟು 2,935 ಮತದಾರರು ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಶೇ.86.50 ತಲುಪಿ ಪೂರ್ಣಗೊಂಡಿತು.

ಒಟ್ಟಾರೆಯಾಗಿ ಜಿಲ್ಲೆಯ ಎಲ್ಲ 9 ಮತಗಟ್ಟೆಗಳಲ್ಲಿ ಮತದಾರರು ಉತ್ಸಾಹದಿಂದ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ಯಾವುದೇ ಅಹಿತಕರ ಘಟನೆ, ಅಕ್ರಮಗಳು ನಡೆಯದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅಗತ್ಯ ಕ್ರಮ, ಭದ್ರತೆ ಕಲ್ಪಿಸಲಾಗಿತ್ತು.

Must Read