ಹೊಸದಿಗಂತ ವರದಿ ರಾಮನಗರ:
ರಾಜ್ಯ ವಿಧಾನಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ಮತದಾನ ಅ.23ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ನಡೆದ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯಲ್ಲಿ ಶೇ.96.66 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಜಿಲ್ಲೆಯ 9 ಮತಗಟ್ಟೆಯಲ್ಲಿ ಶಾಂತಿಯುತ ಮತದಾನವಾಗಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 1,688 ಪುರುಷ ಮತದಾರರು ಹಾಗೂ 1,505 ಮಹಿಳಾ ಮತದಾರರು ಸೇರಿ ಒಟ್ಟಾರೆ 3,193 ಮತದಾರರಿದ್ದಾರೆ. 1,633 ಪುರುಷ ಹಾಗೂ 1,439 ಮಹಿಳಾ ಮತದಾರರು ಸೇರಿದಂತೆ ಒಟ್ಟಾರೆ 3,072 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟಾರೆ ಶೇ. 96.66 ಮತದಾನವಾಗಿದೆ.
ಮತಗಟ್ಟೆಗಳ ವಿವರ :
ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ನಡೆದ ಚುನಾವಣೆಗೆ ಜಿಲ್ಲೆಯಲ್ಲಿ ಒಟ್ಟು 9 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ರಾಮನಗರ, ಚನ್ನಪಟ್ಟಣ, ಮಾಗಡಿ ಹಾಗೂ ಕನಕಪುರ ತಾಲ್ಲೂಕುಗಳಲ್ಲಿ ತಲಾ 2 ಹಾಗೂ ಹಾರೋಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಒಂದು ಮತಗಟ್ಟೆಯನ್ನು ರಚಿಸಲಾಗಿತ್ತು.
ಮಾಗಡಿ ತಾಲ್ಲೂಕಿನ ಭಾಗ ಸಂಖ್ಯೆ-47ರ ತಹಶೀಲ್ದಾರರ ಕಚೇರಿಯ ಕೋರ್ಟ್ ಆವರಣದಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆ ವ್ಯಾಪ್ತಿಯಲ್ಲಿ 185 ಪುರುಷ ಹಾಗೂ 126 ಮಹಿಳಾ ಮತದಾರರು ಸೇರಿ ಒಟ್ಟಾರೆ 311 ಮತದಾರರಿದ್ದಾರೆ. ಅವರ ಪೈಕಿ 295 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಇದರಲ್ಲಿ 175 ಪುರುಷರು ಹಾಗೂ 120 ಮಹಿಳಾ ಮತದಾರರು ತಮ್ಮ ಚಲಾಯಿಸಿದ್ದಾರೆ ಹಾಗೂ ಭಾಗ ಸಂಖ್ಯೆ-48ರ ಕುದೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿಯಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಯಲ್ಲಿ 161 ಪುರುಷ ಹಾಗೂ 83 ಮಹಿಳಾ ಮತದಾರರು ಸೇರಿ ಒಟ್ಟಾರೆ 244 ಮತದಾರರ ಪೈಕಿ 240 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಇದರಲ್ಲಿ 160 ಪುರುಷ ಮತದಾರರು ಹಾಗೂ 80 ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಒಟ್ಟಾರೆ ಮಾಗಡಿ ತಾಲ್ಲೂಕಿನಲ್ಲಿ 555 ಮತದಾರರಿದ್ದು, 535 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಪೈಕಿ 335 ಪುರುಷರು ಹಾಗೂ 200 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ.
ರಾಮನಗರ ತಾಲ್ಲೂಕಿನಲ್ಲಿ ತಾಲೂಕು ಆಡಳಿತ ಸೌಧದಲ್ಲಿರುವ ತಹಶೀಲ್ದಾರ್ ಕಚೇರಿ ಆವರಣದಲ್ಲಿ 2 ಮತಗಟ್ಟೆಗಳಿದ್ದು, ಕೊಠಡಿ ಸಂಖ್ಯೆ-01ರ, ಭಾಗ ಸಂಖ್ಯೆ-49ರಲ್ಲಿ 217 ಪುರುಷ ಹಾಗೂ 272 ಮಹಿಳಾ ಮತದಾರರು ಸೇರಿ ಒಟ್ಟಾರೆ 489 ಮತದಾರರ ಪೈಕಿ 466 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಇದರಲ್ಲಿ 209 ಪುರುಷ ಮತದಾರರು ಹಾಗೂ 257 ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ ಹಾಗೂ ಕೊಠಡಿ ಸಂಖ್ಯೆ-02ರ, ಭಾಗ ಸಂಖ್ಯೆ-50ರಲ್ಲಿ 183 ಪುರುಷ ಹಾಗೂ 161 ಮಹಿಳಾ ಮತದಾರರು ಸೇರಿ ಒಟ್ಟಾರೆ 344 ಮತದಾರರ ಪೈಕಿ 328 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಇದರಲ್ಲಿ 175 ಪುರುಷ ಮತದಾರರು ಹಾಗೂ 153 ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಒಟ್ಟಾರೆ ರಾಮನಗರ ತಾಲ್ಲೂಕಿನಲ್ಲಿ 833 ಮತದಾರರಿದ್ದು, 794 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಪೈಕಿ 384 ಪುರುಷರು ಹಾಗೂ 410 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ.
ಚನ್ನಪಟ್ಟಣ ತಾಲ್ಲೂಕಿನ ಭಾಗ ಸಂಖ್ಯೆ-51ರ ತಾಲ್ಲೂಕು ಆಡಳಿತ ಸೌಧದ ತಹಶೀಲ್ದಾರ್ ಕಚೇರಿಯಲ್ಲಿ ಸ್ಥಾಪಿಸಲಾದ ಮತಗಟ್ಟೆಯಲ್ಲಿ 370 ಪುರುಷ ಹಾಗೂ 400 ಮಹಿಳಾ ಮತದಾರರು ಸೇರಿ ಒಟ್ಟಾರೆ 770 ಮತದಾರರ ಪೈಕಿ 749 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಇದರಲ್ಲಿ 362 ಪುರುಷ ಮತದಾರರು ಹಾಗೂ 387 ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ ಹಾಗೂ ಭಾಗ ಸಂಖ್ಯೆ-52ರ ಕೋಡಂಬಳ್ಳಿಯ ನಾಡಕಚೇರಿಯಲ್ಲಿ ರಚಿಸಲಾಗಿರುವ ಮತಗಟ್ಟೆಯಲ್ಲಿ 95 ಪುರುಷ ಹಾಗೂ 61 ಮಹಿಳಾ ಮತದಾರರಿದ್ದು, ಒಟ್ಟಾರೆ 156 ಮತದಾರರ ಪೈಕಿ 153 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಇದರಲ್ಲಿ 92 ಪುರುಷ ಮತದಾರರು ಹಾಗೂ 61 ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಒಟ್ಟಾರೆ ಚನ್ನಪಟ್ಟಣ ತಾಲ್ಲೂಕಿನಲ್ಲಿ 926 ಮತದಾರರಿದ್ದು, 902 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಪೈಕಿ 454 ಪುರುಷರು ಹಾಗೂ 448 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ.
ಹಾರೋಹಳ್ಳಿ ತಾಲ್ಲೂಕಿನ ಭಾಗ ಸಂಖ್ಯೆ-53ರ ಕೆಪಿಎಸ್ ಜಿಎಚ್ಪಿಎಸ್ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಲಾದ ಮತಗಟ್ಟೆಯಲ್ಲಿ 101 ಪುರುಷ ಹಾಗೂ 99 ಮಹಿಳಾ ಮತದಾರರು ಸೇರಿ ಒಟ್ಟಾರೆ 200 ಮತದಾರರ ಪೈಕಿ 199 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಇದರಲ್ಲಿ 100 ಪುರುಷ ಮತದಾರರು ಹಾಗೂ 99 ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಕನಕಪುರ ತಾಲ್ಲೂಕಿನಲ್ಲಿ ತಾಲೂಕು ಆಡಳಿತ ಸೌಧದಲ್ಲಿರುವ ತಹಶೀಲ್ದಾರ್ ಕಚೇರಿ ಆವರಣದಲ್ಲಿ 2 ಮತಗಟ್ಟೆಗಳಿದ್ದು, ಕೊಠಡಿ ಸಂಖ್ಯೆ-101ರ, ಭಾಗ ಸಂಖ್ಯೆ-54ರಲ್ಲಿ 192 ಪುರುಷ ಹಾಗೂ 147 ಮಹಿಳಾ ಮತದಾರರು ಸೇರಿ ಒಟ್ಟಾರೆ 339 ಮತದಾರರ ಪೈಕಿ 331 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಇದರಲ್ಲಿ 188 ಪುರುಷ ಮತದಾರರು ಹಾಗೂ 143 ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ ಹಾಗೂ ಕೊಠಡಿ ಸಂಖ್ಯೆ-102ರ, ಭಾಗ ಸಂಖ್ಯೆ-55ರಲ್ಲಿ 184 ಪುರುಷ ಹಾಗೂ 156 ಮಹಿಳಾ ಮತದಾರರು ಸೇರಿ ಒಟ್ಟಾರೆ 340 ಮತದಾರರ ಪೈಕಿ 311 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಇದರಲ್ಲಿ 172 ಪುರುಷ ಮತದಾರರು ಹಾಗೂ 139 ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಒಟ್ಟಾರೆ ಕನಕಪುರ ತಾಲ್ಲೂಕಿನಲ್ಲಿ 679 ಮತದಾರರಿದ್ದು, 642 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಪೈಕಿ 360 ಪುರುಷರು ಹಾಗೂ 282 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ.
ಈ ಮೂಲಕ ಜಿಲ್ಲೆಯಲ್ಲಿ ಒಟ್ಟಾರೆ ಶೇ. 96.66 ಮತದಾನವಾಗಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



